Follow Us On

Google News
Important
Trending

ಕಳ್ಳತನ ಪ್ರಕರಣ: ಮೂವರ ಬಂಧನ

ದಾoಡೇಲಿ: ವನಶ್ರೀ ನಗರದ ಮನೆ ಒಂದರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ದಾಂಡೇಲಿ ನಗರ ಪೊಲೀಸ್ ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಅಶೋಕ್ ದೇಮಣ್ಣ ಗುರವ, ಫೈರೋಜ್ ದೌಲತ್ತಿ, ಮೈಕಲ್ ಬನ್ನಿ ಕಕ್ಕೇರಿ ಬಂಧಿತ ಆರೋಪಿಗಳು.

ಸಿಪಿಐ ಭೀಮಣ್ಣ ಸೂರಿ ನೇತೃತ್ವದಲ್ಲಿ ಪಿಎಸ್‌ಐಗಳಾದ ಐ.ಆರ್. ಗಡೇಕರ ಮತ್ತು ರವೀಂದ್ರ ಬಿರಾದಾರ, ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರಿoದ 2 ಬಂಗಾರದ ಉಂಗುರ ನಗದು ಹಣ, ಬೆಳ್ಳಿಯ ಕಾಲು ಚೈನ್, ಬೆಳ್ಳಿಯ ಕೈಬಳೆ, ವಾಚ್, ಬೆಳ್ಳಿಯ ಹಣತೆ ಮತ್ತು ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button