Uttara Kannada
Trending

ಕರೊನಾ ವಿರುದ್ಧ ಸಮರ ಸಾರಿದ ಅಂಕೋಲಾ ಪುರಸಭೆ

  • ಸ್ಪ್ರೇಯರ್ ಮಶೀನ್ ಖರೀದಿಸಿ ಕೋವಿಡ್-19 ವಿರುದ್ದ ಹೋರಾಡಲು ಮುಂದಾದ ಅಂಕೋಲಾ ಪುರಸಭೆ.
  • ಆರೋಗ್ಯ ಇಲಾಖೆ ಹೊರತುಪಡಿಸಿ ಥರ್ಮಲ್ ಸ್ಕ್ಯಾನರ್ ಬಳಸುತ್ತಿರುವ ಮೊದಲ ಇಲಾಖೆ.
[sliders_pack id=”1487″]

ಅಂಕೋಲಾ : ಹೊಸ ಸ್ಪ್ರೇಯರ್ ಮಶೀನ್ ಮತ್ತು ಥರ್ಮಲ್ ಸ್ಕ್ಯಾನರ್ ಖರೀದಿಸುವ ಮೂಲಕ ಪುರಸಭೆಯವರು ಕೋವಿಡ್-19 ವಿರುದ್ದ ಹೋರಾಡಲು ಮತ್ತಷ್ಟು ಸಿದ್ದತೆ ಮಾಡಿಕೊಂಡಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಪಟ್ಟಣದ ಪ್ರಮುಖ ರಸ್ತೆಗಳ ಅಂಚಿನ ಗಟಾರಗಳಿಗೆ ಸೋಡಿಯಂ ಹೈಪೋ ದ್ರಾವಣ ಸಿಂಪಡಿಸಲಾಗಿತ್ತು. ತದನಂತರ ಕ್ವಾರೆಂಟೈನ್ ಕೇಂದ್ರಗಳ ಆವರಣಗಳಲ್ಲಿಯೂ ದ್ರಾವಣ ಸಿಂಪಡಿಸಲು ಅಗ್ನಿಶಾಮಕದಳದ ಎರವಲು ಸೇವೆ ಪಡೆಯಲಾಗಿತ್ತು. ಪಟ್ಟಣದ ನೈರ್ಮಲ್ಯೀಕರಣಕ್ಕೆ ಒತ್ತು ನೀಡುವ ಸಲುವಾಗಿ ಪುರಸಭೆ ವತಿಯಿಂದ 3ಅಶ್ವಶಕ್ತಿ ಮೋಟಾರ್ ಹೊಂದಿರುವ ಹೊಸ ಸ್ಪ್ರೇಯರ್ ಮಶೀನ್ ಖರೀದಿಸಲಾಗಿದ್ದು, ಅದನ್ನು ಬಳಸಿ 1 ಸಾವಿರದಿಂದ 5ಸಾವಿರ ಲೀಟರ್ ಸಾಮಥ್ರ್ಯದ ದ್ರಾವಣವನ್ನು ಸಿಂಪಡಿಸಬಹುದಾಗಿದೆ.

ಪುರಸಭೆಯಲ್ಲಿಯೂ ಥರ್ಮಲ್ ಸ್ಕ್ಯಾನರ್ : ಕಾರ್ಯಾಲಯದ ಸಿಬ್ಬಂದಿಗಳ ಮತ್ತು ಬಂದು ಹೋಗುವ ಸಾರ್ವಜನಿಕರ ಆರೋಗ್ಯ ಸುರಕ್ಷತೆ ಮಾಹಿತಿ ತಿಳಿದು ಕೊಳ್ಳಲು ಅನುಕೂಲವಾಗುವಂತೆ ಹೊಸ ಥರ್ಮಲ್ ಸ್ಕ್ಯಾನರ್ ಯಂತ್ರ ಖರೀದಿಸಲಾಗಿದ್ದು, ಕಾರ್ಯಾಲಯದ ಸಿಬ್ಬಂದಿಗಳೇ, ಈ ಯಂತ್ರ ಉಪಯೋಗಿಸಿ ಇತರರ ದೇಹದ ತಾಪಮಾನ ಪರೀಕ್ಷಿಸುವ ತರಬೇತಿ ನೀಡಲಾಗಿದೆ. ಆರೋಗ್ಯ ಇಲಾಖೆ ಹೊರತುಪಡಿಸಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಥರ್ಮಲ್ ಸ್ಕ್ಯಾನರ್ ಬಳಸುತ್ತಿರುವ ಸರ್ಕಾರಿ ಇಲಾಖೆಯಾಗಿ ಪುರಸಭೆ ಗುರುತಿಸಿಕೊಂಡಿದೆ.
ಪ್ರಾತ್ಯಕ್ಷಿತೆ ವೇಳೆ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ಪರಿಸರ ಅಭಿಯಂತರ ಪ್ರಿಯಾಂಕಾ ಎ.ಎಮ್, ಆರೋಗ್ಯ ನಿರೀಕ್ಷಕ ಪ್ರವೀಣ ನಾಯಕ, ಸ್ವಚ್ಛತಾ ಮೇಲ್ವಿಚಾರಕ ವಿಷ್ಣು ಗೌಡ, ಸಿಬ್ಬಂದಿಗಳಾದ ಹರಿಚಂದ್ರ ನಾಯ್ಕ, ಉಮಾಕಾಂತ ನಾಯ್ಕ ಮತ್ತಿತ್ತರರು ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.

Back to top button