Follow Us On

WhatsApp Group
Important
Trending

ಸರಗಳ್ಳತನ ಆರೋಪಿಗಳ ಬಂಧನ

3.45 ಲಕ್ಷ ಮೌಲ್ಯದ ಬಂಗಾರ ವಶಕ್ಕೆ
3 ಸರಗಳ್ಳತನ ಬೇಧಿಸಿದ ಪೊಲೀಸರು

ಜೊಯಿಡಾ : ತಾಲೂಕಿನಲ್ಲಿ ನಡೆದ ಮೂರು ಬಂಗಾರದ ಸರ ಗಳ್ಳತನ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯನ್ನು ಬಂಧಿಸಿ 3.75 ಲಕ್ಷದ ಕದ್ದ ಬಂಗಾರವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ದೀಪಕ ಚಂದ್ರಕಾಂತ ಪಾಟ್ನೆಕರ (35) ರಾಮನಗರ ನಿವಾಸಿ ಎಂದು ಗುರುತಿಸಲಾಗಿದ್ದು, 2020 ರಲ್ಲಿ ನಡೆದ ಎರಡು ಪ್ರಕರಣ ಮತ್ತು 2019 ರಲ್ಲಿ ನಡೆದ ಒಂದು ಪ್ರಕರಣವನ್ನು ಭೇದಿಸಿ ಒಟ್ಟು ಮೊತ್ತ 3.75 ಲಕ್ಷದ ಒಟ್ಟೂ 92.940 ಗ್ರಾಮ್ ಬಂಗಾರ ವಶಪಡಿಸಿಕೊಳ್ಳಾಗಿದೆ.
ಎಸ್.ಪಿ ಶಿವಪ್ರಕಾಶ ದೇವರಾಜು ಮತ್ತು ದಾಂಡೇಲಿ ಡಿವಾಯ್ ಎಸ್ ಪಿ ಶಿವಾನಂದ ಚಲವಾದಿ ಮರ‍್ಗರ‍್ಶನದಲ್ಲಿ ಜೊಯಿಡಾ ಸಿಪಿಐ ಬಾಬಾಸಾಹೇಬ ಹುಲ್ಲಣ್ಣನವರ,ರಾಮನಗರ ಪಿಎಸೈ ಕಿರಣ ಪಾಟೀಲ ಮತ್ತು ಕ್ರೈಂ ಪಿಎಸೈ ಮಂಜುಳಾ ರಾವೋಜಿ ಹಾಗೂ ಸಿಬ್ಬಂದಿಗಳು ಈ ಪ್ರಕರಣ ಭೇದಿಸುವಲ್ಲಿ ಯಶಸಿಯಾಗಿದ್ದಾರೆ.

ವಿಸ್ಮಯ ನ್ಯೂಸ್ ಜೊಯಿಡಾ

[sliders_pack id=”1487″]

Back to top button