Follow Us On

WhatsApp Group
Important
Trending

ದೂರದ ಮತಗಟ್ಟೆಗೆ ತೆರಳಿ ಮತ ಚಲಾಯಿಸದಿರಲು ತೀರ್ಮಾನ

ಗ್ರಾ.ಪಂ. ಚುನಾವಣೆ ಸಂದರ್ಭದಲ್ಲಿ ಮತದಾನದ ಬಹಿಷ್ಕಾರದ ಎಚ್ಚರಿಕೆ
ಭಾವಿಕೇರಿ ಗ್ರಾ.ಪಂ.ವ್ಯಾಪ್ತಿಯ ಮಂಡದಕೊಪ್ಪ ಮಜರೆಯ ಗ್ರಾಮಸ್ಥರಿಂದ ಸುದ್ದಿಗೋಷ್ಠಿ

[sliders_pack id=”1487″]

ಅಂಕೋಲಾ : ತಾಲೂಕಿನ ದೊಡ್ಡ ಗ್ರಾಮಪಂಚಾಯತಗಳಲ್ಲಿ ಒಂದಾಗಿರುವ ಭಾವಿಕೇರಿಯಲ್ಲಿ ಮಂಡದಕೊಪ್ಪ ಎಂಬ ಮಜರೆಯೊಂದಿದ್ದು , ಇಲ್ಲಿಯ ಮತದಾರರು ಬಹಳ ಹಿಂದಿನಿಂದಲೂ ತಮ್ಮ ಹತ್ತಿರದ ಕಾನಬೀರಕೊಪ್ಪ ಮತಗಟ್ಟೆ (ಸಂಖ್ಯೆ 178)ರಲ್ಲಿ ಮತದಾನ ಮಾಡುತ್ತಾ ಬಂದಿದ್ದು, ಕಳೆದ 15ವರ್ಷದಿಂದೀಚೆಗೆ ದೂರದ ಬಡಗೇರಿ ಮತಗಟ್ಟೆಗೆ (ಸಂಖ್ಯೆ 183) ಹೋಗಿ ಮತ ಚಲಾಯಿಸುವಂತಾಗಿದೆ. ಮತಗಟ್ಟೆಯ ಅವೈಜ್ಞಾನಿಕ ಸಮೀಕ್ಷೆಯಿಂದ ಸ್ತ್ರೀಯರು, ವೃದ್ಧರು, ಅನಾರೋಗ್ಯ ಪೀಡಿತರು, ಮತ್ತಿತರರು ಬಹು ದೂರ ಹೋಗಿ ಮತ ಚಲಾಯಿಸಿ ಬರುವುದು ಕಷ್ಟದಾಯಕವಾಗಿದ್ದು, ತಮ್ಮ ಹತ್ತಿರದ ಕಾನಬೀರಕೊಪ್ಪ ಮತಗಟ್ಟೆಯಲ್ಲಿಯೇ ಮತ ಚಲಾವಣೆಗೆ ಅನುಕೂಲ ಕಲ್ಪಿಸಿ ಕೊಡುವಂತೆ ವಿವಿಧ ಮುಖಂಡರು ಗ್ರಾಮಸ್ಥರ ಪರವಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ 3ವರ್ಷಗಳ ಹಿಂದೆಯೇ ಈ ಕುರಿತು ಮನವಿ ನೀಡಿದ್ದರೂ, ನಮ್ಮ ಮನವಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ ಎನ್ನುವುದು ಸ್ಥಳೀಯರ ಆಕ್ರೋಶವಾಗಿದ್ದು, ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ತಮ್ಮ ಹತ್ತಿರದ ಕಾನಬೀರಕೊಪ್ಪದಲ್ಲಿಯೇ ಮುಂದಿನ ದಿನಗಳಲ್ಲಿ ಮತದಾನಕ್ಕೆ ಅನುವು ಮಾಡಿಕೊಡಬೇಕು. ಇಲ್ಲದಿದ್ದರೆ ಸುಮಾರು 340ಕ್ಕೂ ಹೆಚ್ಚಿರುವ ಸ್ಥಳೀಯ ಮತದಾರೆಲ್ಲರೂ ಸೇರಿ ಮತದಾನದ ಬಹಿಷ್ಠಾರ ಇಲ್ಲವೇ ಪಕ್ಕದ ಮತಗಟ್ಟೆಗೆ ವರ್ಗಾವಣೆಯಾಗುವ ಎಚ್ಚರಿಕೆ ನೀಡಿದ್ದಾರೆ.

ಪ್ರಮುಖರಾದ ಸಂಜಯ್ ನಾಯ್ಕ, ನಾರಾಯಣ ನಾಯ್ಕ, ಬಾಲಕೃಷ್ಣ ನಾಯ್ಕ, ಶುಭಾಂಗ ನಾಯ್ಕ, ಸಂದೀಪ ನಾಯ್ಕ, ಗಜಾನನ ನಾಯ್ಕ, ರಮಾಕಾಂತ ನಾಯ್ಕ, ದಿನೇಶ ನಾಯ್ಕ, ರಾಜು ನಾಯ್ಕ, ಲಕ್ಷ್ಮಣ ನಾಯ್ಕ, ವಸಂತ ನಾಯ್ಕ, ಮಧು ನಾಯ್ಕ, ಪದ್ಮನಾಭ ನಾಯ್ಕ, ಸುಧಾಕರ ನಾಯ್ಕ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button