ಮಾಹಿತಿ
Trending

ಭಾರಿ ಮಳೆಯಿಂದ ತೋಟ, ಗದ್ದೆ ಜಲಾವೃತ

ಶಿರಸಿ : ಸುರಿಯುತ್ತಿರುವ ಭಾರಿ ಮಳೆಗೆ ಶಿರಸಿ ತಾಲೂಕು ಬನವಾಸಿ ರಸ್ತೆಯ ಉಂಚಳ್ಳಿ ಹತ್ತಿರದ ಮಾಸ್ತಿ ಜಡ್ಡಿ ಹೊಳೆಯು ತುಂಬಿ ಹರಿದಿದ್ದರಿಂದ ವೆಂಕಟೇಶ ನಾಯ್ಕ ಅವರ ತೋಟಕ್ಕೆ ನೀರು ನುಗಿದ್ದರಿಂದ ನದಿ ಪಾತ್ರದಲ್ಲಿರುವ ಹತ್ತು ಎಕರೆಗೂ ಮೇಲ್ಪಟ್ಟ ಪ್ರದೇಶಗಳಲ್ಲಿ ಬಾಳೆ, ನಾಟಿ ಮಾಡಲಾಗಿದ್ದ ಗದ್ದೆ, ಹಣ್ಣು ಹಂಪಲು ಸಸಿಗಳು, ಅಡಿಕೆ, ತೆಂಗಿನ ಗಿಡಗಳು ತೇಲಿ ಹೋಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ ಎಂದು ಹೇಳಲಾಗಿದೆ. ಪ್ರತಿ ವರ್ಷವೂ ಮಾಸ್ತಿ ಜಡ್ಡಿ ಹೊಳೆಯಲ್ಲಿ ರೇತಿ ತೆಗೆಯುವುದರಿಂದ ನದಿಯ ತಿರುವು ಹೆಚ್ಚಾಗಿ ಭಾರಿ ಪ್ರಮಾಣದ ಮಳೆ ಬಂದಾಗ ಹೊಳೆ ನೀರು ತೋಟ ಗದ್ದೆಗಳಿಗೆ ನುಗ್ಗಿ ಭಾರಿ ನಷ್ಟ ಉಂಟು ಮಾಡುತ್ತದೆ.

ಪ್ರತಿ ವರ್ಷವೂ ಭಾರಿ ನಷ್ಟ ಉಂಟು ಮಾಡುವ ಹಳ್ಳಕ್ಕೆ ರೇತಿ ತೆಗೆಯುವುದನ್ನು ನಿರ್ಬಂಧಿಸಿ ಪಿಚ್ಚಿಂಗ ಕಟ್ಟುವ ಮೂಲಕ ನದಿಯ ನೀರು ನೇರವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಮಾಸ್ತಿ ಜಡ್ಡಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸಲು ಆದೇಶಿಸಬೇಕೆಂದು ಡಾ. ವೆಂಕಟೇಶ.ಎಲ್. ನಾಯ್ಕ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button