Follow Us On

WhatsApp Group
Uttara Kannada
Trending

ಗದ್ದೆ ಕೆಲಸಕ್ಕೆ ಹೋದ ಮಹಿಳೆ ಹಾವು ಕಚ್ಚಿ ಸಾವು

ಭಟ್ಕಳ:- ತಾಲ್ಲೂಕಿನ ಬೈಲೂರು ಗ್ರಾಮದ ಮಡಿಕೇರಿಯಲ್ಲಿ ಮಂಗಳವಾರ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ

ಬೈಲೂರು ಗ್ರಾಮದ ಮಡಿಕೇರಿ ನಿವಾಸಿ ಪಾರ್ವತಿ ಮಂಜುನಾಥ ನಾಯ್ಕ (55 ) ಮೃತಪಟ್ಟವರು. ಮುಂಜಾನೆ 7 ಘಂಟೆಯ ಸುಮಾರಿಗೆ ಗದ್ದೆ ಕೆಲಸ ಮಾಡಲು ತಮ್ಮ ಜಮೀನಿಗೆ ತೆರಳಿದ್ದು, ಗದ್ದೆಯ ಹಾಳೆ ಸಮೀಪ ಕಳೆ ತೆಗೆಯುತ್ತಿರುವ ಸಂದರ್ಭದಲ್ಲಿ ವಿಷಪೂರಿತ ಹಾವೊಂದು ಆಕೆಯ ಬಲಗೈ ಹೆಬ್ಬೆರಳಿನ ಮೇಲೆ ಕಚ್ಚಿದೆ. ತಕ್ಷಣ ಅವರನ್ನು ಹೊನ್ನಾವರದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲು ಧಾಖಲಿಸಲಯಿತು. ಆದರೆ, ಅದು ಫಲಕಾರಿಯಾಗಲಿಲ್ಲ. ವಿಷ ಏರಿದ್ದರಿಂದ ಪಾರ್ವತಿ ಅವರು ಮೃತಪಟ್ಟರುವುದು ತಿಳಿದು ಬಂದಿದೆ.

ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button