ಮಾಹಿತಿ
Trending

ಮಿನಿವಿಧಾನಸೌಧದ ಕಾಮಗಾರಿ ಕಳಪೆ ಆರೋಪ

ಜೊಯಿಡಾ: ತಾಲೂಕಿನ ಲೋಕೋಪಯೋಗಿ ಇಲಾಖೆ ಉಪ ವಿಭಾಗಕ್ಕೆ ಸಂಬoದಿಸಿದ ಡಿಪ್ಲೋಮಾ ಕಾಲೇಜಿನ ಅಡಿಟೋರಿಯಮ್ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತು ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯನ್ನು ಸಂಪೂರ್ಣ ಕಳಪೆಯಾಗಿ ಮಾಡಲಾಗುತ್ತಿದೆ. ಈ ಎರಡೂ ಕಾಮಗಾರಿ ಬಗ್ಗೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ(ರಿ) ರಾಜ್ಯಾಧ್ಯಕ್ಷ ಚಂದ್ರಕಾoತ ಕಾದ್ರೋಳ್ಳಿ, ಜಿಲ್ಲಾಧ್ಯಕ್ಷ ಗಿರೀಶ ಎನ್ ಎಸ್ ಮತ್ತು ತಾಲೂಕಾಧ್ಯಕ್ಷ ಅಶೋಕ ಕಾಂಬಳೆ ಇವರು ಮುಖ್ಯ ಇಂಜೀನಿಯರ ಲೋಕೋಪಯೋಗಿ ಇಲಾಖೆ ಧಾರವಾಡ ಇವರಿಗೆ ದೂರು ಸಲ್ಲಿಸಿದ್ದಾರೆ.


ಕಾಮಗಾರಿಗೆ ಬಳಸಿದಂತ ಸಿಮೇಂಟನ್ನು ಅವದಿ ಮುಗಿದ ನಂತರ ಬಳಸಿ ಕೆಲಸ ಮಾಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ರಿಜೇಕ್ಟ್ ಮಾಡಲಾದ ಕಬ್ಬಿಣ ಬಳಸಲಾಗಿದೆ. ಮಿನಿ ವಿಧಾನ ಸೌಧ ಕಟ್ಟಡ ಉದ್ಘಾಟನೆ ಆಗುವ ಮುಂಚೆಯೇ ಕಳಪೆ ಕಾಮಗಾರಿಯಿಂದಾಗಿ ಕಟ್ಟಡ ಸಂಪೂರ್ಣವಾಗಿ ಸೋರುತ್ತಿದೆ. ಈ ಕಾಮಗಾರಿಗಳ ಬಗ್ಗೆ ಸ್ಥಳಿಯ ಲೋಕೋಪಯೋಗಿ ಇಂಜನಿಯರ್ ಅವರ ಗಮನಕ್ಕೆ ತಂದರೂ ತೆಗೆದು ಸರಿಯಾಗಿ ಕಾಮಗಾರಿ ಮಾಡಲಾಗುತ್ತದೆ ಎಂದು ತಿಳಿಸಿರುತ್ತಾರೆ. ಹಿಗಿದ್ದೂ ಸಹ ಮತ್ತೆ ಇದರ ಮೇಲೆ ಕಾಮಗಾರಿ ನಡೆಸಲಾಗುತ್ತಿದೆ. ಕೂಡಲೆ ಈ ಎರಡೂ ಕಾಮಗಾರಿಯ ಬಿಲ್ಲ ತಡೆಹಿಡಿದು ಕಳಪೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಗುಣ ಬರವಸೆಯ ಅಧಿಕಾರಿಗಳಿಂದ ಕಾಮಗಾರಿಯನ್ನು ಪರಿಸಿಲಿಸಿ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಲಾಗಿದೆ.


ಚಂದ್ರಕಾoತ ಕಾದ್ರೋಳ್ಳಿ ರಾಜ್ಯಾಧ್ಯಕ್ಷರು ದಸಸ (ರಿ): ಡಿಪ್ಲೋಮಾ ಕಾಲೇಜಿನ ಅಡಿಟೋರಿಯಮ್ ನಿರ್ಮಾಣ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿ ಮಾಡಲಾಗುತ್ತಿದೆ. ಮಿನಿ ವಿಧಾನ ಸೌಧ ಕೂಡಾ ಸೋರುತ್ತಿದೆ. ಈ ಬಗ್ಗೆ ಗುಣ ಬರವಸೆಯ ಅಧಿಕಾರಿಗಳನ್ನು ಕಳುಹಿಸಿ ಕಾಮಗಾರಿಯನ್ನು ಪರಿಸಿಲಿಸುವಂತೆ ದೂರು ಕೊಟ್ಟಿದ್ದೆವೆ. ಕೆಲಸಕ್ಕೆ ತೆಗೆದುಕೊಂಡ ಕಾರ್ಮಿಕರಿಗೂ ಹಣ ಕೊಡದೆ ಸತಾಯಿಸಲಾಗುತ್ತಿರುವ ಬಗ್ಗೆ ನಮ್ಮ ಸಂಘಟನೆಗೆ ಕಾರ್ಮಿಕರು ದೂರು ಕೊಟ್ಟಿದ್ದಾರೆ. ಈ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕಾನೂನಿನಡಿ ಪ್ರಕರಣ ದಾಖಲಿಸಲಾಗುತ್ತದೆ.

ವಿಸ್ಮಯ ನ್ಯೂಸ್ ಜೋಯ್ಡಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button