ಅಂಕೋಲಾ: ಗೃಹರಕ್ಷಕ ದಳ ಎಂದು ಕರೆಸಿಕೊಳ್ಳುವ ಹೋಂ ಗಾರ್ಡ್ Home Guard) ವಿಭಾಗದ ಡಿಸ್ಟ್ರಿಕ್ಟ್ ಕಮಾಂಡೆಂಟ್ ಆಗಿ ಡಾ. ಸಂಜು ನಾಯಕ ಅಧಿಕಾರ ವಹಿಸಿಕೊಂಡಿದ್ದು, ಅಂಕೋಲಾ ಯೂನಿಟ್ ಗೆ ಪ್ರಥಮ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ವಿನೋದ ಶ್ಯಾನಭಾಗ ನೇತೃತ್ವದಲ್ಲಿ ಸ್ಥಳೀಯ ಘಟಕದ ಪರವಾಗಿ ಸ್ವಾಗತಿಸಿ ಗೌರವಿಸಲಾಯಿತು. ಅಂಕೋಲಾ ತಾಲೂಕಿನ ಶಿರಗುಂಜಿ ಮೂಲದವರಾದ ಸಂಜು ತಿಮ್ಮಣ್ಣ ನಾಯಕ ಇವರು, ಜಿಲ್ಲೆಯ ಹೆಸರಾಂತ ದಂತ ವೈದ್ಯರಾಗಿ ಡಾ ಸಂಜು ಎಂದೇ ಪರಿಚಿತರಾಗಿದ್ದಾರೆ.
ವೈದ್ಯ ವೃತ್ತಿ ಬದುಕಿನ ಜೊತೆಯಲ್ಲಿಯೇ ತಮ್ಮದೇ ಆದ ಶೈಕ್ಷಣಿಕ ಸಂಸ್ಥೆ ಹುಟ್ಟು ಹಾಕಿದ್ದಲ್ಲದೇ, ಪ್ರವಾಸೋದ್ಯಮ ಪೂರಕ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿಯೂ ಬೇರೆ ಬೇರೆ ರೀತಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಕೋಲಾ ರೂರಲ್ ರೋಟರಿ ಕ್ಲಬ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಹತ್ತಾರು ವಿಧಾಯಕ ಕಾರ್ಯಕ್ರಮಗಳು ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮತ್ತಷ್ಟು ಪ್ರಸಿದ್ಧಿ ಪಡೆದಿದ್ದರು.,
ಇದೀಗ ಸೆ. 13 ರಂದು ಇವರು ಉಕ ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಗೌರವ ಸಮಾದೇಷ್ಟರ ಹುದ್ದೆಯನ್ನು ವಹಿಸಿಕೊಂಡಿದ್ದಾರೆ. ಹೋಂ ಗಾರ್ಡ್ (ಗೃಹರಕ್ಷಕ ದಳ) ಕಮಾಂಡೆಟ್ ಹುದ್ದೆಯನ್ನು ಸಂಜು ನಾಯಕ ಅವರಿಗೆ ಹಸ್ತಾಂತರಿಸಿದ ಎಡಿಶನಲ್ ಎಸ್ಪಿ ಸಿಟಿ ಜಯಕುಮಾರ ಶುಭ ಕೋರಿದ್ದರು. ಅದಾದ ಮಾರನೇ ದಿನ ಅಂದರೆ ಗುರುವಾರ ಬೆಳಿಗ್ಗೆ ಅಂಕೋಲಾ ಪಟ್ಟಣ ವ್ಯಾಪ್ತಿಯ ಸ್ವಾತಂತ್ರ‍್ಯ ಸ್ಮಾರಕ ಭವನದ ಆವರಣದಲ್ಲಿ ನಡೆಯುತ್ತಿದ್ದ ಸ್ಥಳೀಯ ಗ್ರಹರಕ್ಷಕ ಘಟಕದ ಕಾರ್ಯ ವೈಖರಿ ವೀಕ್ಷೀಸಲು ನೂತನ ಡಿಸ್ಟ್ರಿಕ್ಟ್ ಕಮಾಂಡೆಂಟ್ ಸಂಜು ನಾಯಕ ಅವರು ಭೇಟಿ ನೀಡಿದ್ದರು.
ಈ ವೇಳೆ ವಿನೋದ್ ಶಾನಭಾಗ್ ನೇತೃತ್ವದ ಅಂಕೋಲಾ ರಕ್ಷಕ ದಳದ ಸಿಬ್ಬಂದಿಗಳು,ಸoಜು ನಾಯಕ್ ಅವರನ್ನು ಪುಷ್ಪ ನೀಡಿ ಸ್ವಾಗತಿಸಿ, ಶಾಲು ಹೊದಿಸಿ, ಖಾಕಿ ಹಾರ ಸಮರ್ಪಿಸಿ ಫಲ ತಾಂಬೂಲ ನೀಡಿ ಸನ್ಮಾನಿಸಿ ಗೌರವಿಸಿದರು. ತಮ್ಮ ಘಟಕಕ್ಕೆ ಪ್ರಥಮ ಭೇಟಿ ನೀಡಿದ ಜಿಲ್ಲಾ ಸಮಾದೇಷ್ಟರಿಗೆ ಕವಾಯಿತು ನಡೆಸಿ , ಗೌರವ ಸೂಚಿಸಿದ ಸಿಬ್ಬಂದಿಗಳು, ಘಟಕದ ಶಿಷ್ಟಾಚಾರ ಪಾಲನೆ ಮಾಡಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ