Important
Trending

G D Bhat Kekkar: ಕೆಕ್ಕಾರು ಜಿ.ಡಿ.ಭಟ್ ಕೈಚಳಕ: ನೈಜವಾಗಿ ಮೂಡಿಬಂದಿದೆ ತಾಯಿ ಗೌರಿಯೊಂದಿಗೆ ಬಾಲಗಣೇಶ ಮಾತನಾಡುತ್ತಿರುವ ದೃಶ್ಯ

ಗೌರಿಯ ಸೀರೆ, ಬ್ಲೌಸ್, ಆಭರಣ ಎಲ್ಲವೂ ನೈಜವಾಗಿದೆ ಎಂಬoತೆ ಮೂಡಿಬಂದಿದೆ.

ಕಾರವಾರ: (ganesh chaturthi) ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ಎಲ್ಲೆಡೆ ವೈವಿದ್ಯಮಯವಾದ ಗಣೇಶನ ಮೂರ್ತಿಗಳು ಕಾಣಸಿಗುತ್ತಿವೆ. ವಿವಿಧ ಬಗೆಯ ಭಂಗಿ, ಹಾವಭಾವಗಳಿಂದ ಗಣೇಶ ಮೂರ್ತಿಗಳು ( ganesh idol) ಸಾರ್ವಜನಿಕರನ್ನು ಆಕರ್ಷಿಸುತ್ತಿವೆ. ಇಂತಹ ಕಲಾತ್ಮಕ ಮೂರ್ತಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುವವರು, ಕೆಕ್ಕಾರು ಜಿ.ಡಿ.ಭಟ್ (G D Bhat Kekkar) .. ಹೌದು, ಅವರ ಕಲಾತ್ಮಕ ಶೈಲಿಯ, ಸೃಜನಾತ್ಮಕ ಗಣಪತಿ ಮೂರ್ತಿಗಳು, ಅತ್ಯಂತ ಸಹಜವಾಗಿ, ನೈಜವಾಗಿ ಮೂಡಿಬರುತ್ತದೆ. ಅಂತಹ ಮಾಂತ್ರಿಕ ಕಲಾಗಾರಿಕೆ ಅವರಿಗೆ ಸಿದ್ಧಿಸಿದೆ ಅಂದರೆ ಅತಿಶಯೋಕ್ತಿ ಅಲ್ಲ.

ಈ ಬಾರಿ ಮಣ್ಣಿನ ಗೌರಿ ಗಣೇಶನನ್ನು ಮಾಡಿದ್ದು, ಎಲ್ಲರ ಗಮನಸೆಳೆಯುತ್ತಿದೆ. ಇದನ್ನು ನೋಡಿದರೆ ಯಾರೂ ಇದು ಮಣ್ಣಿನ ಮೂರ್ತಿ ಎನ್ನುವಂತಿಲ್ಲ. ಅಷ್ಟು ನೈಜತೆಯಿಂದ ಕೂಡಿದೆ. ಗೌರಿ ಮನೆಯ ಜಗುಲಿಯಲ್ಲಿ ಕುಳಿತಿದ್ದು, ಬಾಲ ಗಣೇಶ (ganesh idol) ಏನನ್ನೋ ತಾಯಿ ಗೌರಿಗೆ ಹೇಳುತ್ತಿರುವ ದೃಶ್ಯ, ಮಣ್ಣಿಗೆ ಜೀವ ತುಂಬಿ ಭಾವಸೃಜಿಸುವ ಅವರ ಕಲೆಗೆ ಬೆರಗಾಗಬೇಕಿದೆ. ಗೌರಿಯ ಸೀರೆ, ಬ್ಲೌಸ್, ಆಭರಣ ಎಲ್ಲವೂ ನೈಜವಾಗಿದೆ ಎಂಬoತೆ ಮೂಡಿಬಂದಿದೆ.

g d bhat kekkar ganehsa photos

(ganesh chaturthi) ಗಣೇಶ ಚತುರ್ಥಿ ಬಂದರೆ ಜಿ.ಡಿ. ಭಟ್ಟರು (G D Bhat Kekkar) ಮಾಡಿದ ಗಣಪತಿ ವಿಗ್ರಹಗಳನ್ನು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಅವರ ಮನೆಗೆ ಆಗಮಿಸುತ್ತಾರೆ. ಸಿಂಹ ಮತ್ತು ಹುಲಿಯ ಮೇಲೆ, ನಾಟ್ಯ ಶೈಲಿಯ ಗಣಪ, ಗರುಡ ವಾಹನ ಗಣಪ, ಹೀಗೆ ವಿಭಿನ್ನ ಗಣಪತಿ ಮೂರ್ತಿಗಳು ಸಹಜವಾಗಿ ಮೂಡಿಬರುವುದು ಇವರ ವಿಶೇಷ. ಅದರಲ್ಲೂ ಗಣಪತಿಯ ಪೀಠ, ಆಭರಣ, ಮಡಿ, ಶಾಲು ಇವೆಲ್ಲವೂ ತುಂಬಾನೆ ಸಹಜವಾಗಿ ಮೂಡಿಸುವುದು ಇವರಿಗೆ ದೈವದತ್ತವಾಗಿ ಒಲಿದಿದೆ.

artist g d bhat kekkar

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button