ಕಾರವಾರ: ಇಲ್ಲಿನ ಗಣೇಶೋತ್ಸವದಲ್ಲಿ ಚಂದ್ರಯಾನದ ರಾಕೆಟ್ ಲಾಂಚಿoಗ್ ಮಾದರಿ (chandrayaan 3 model) ಎಲ್ಲರ ಗಮನಸೆಳೆಯುತ್ತಿದೆ. ಅಟ್ಯೋಮ್ಯಾಟಿಕ್ ಆಗಿ ಥೇಟ್ ಚಂದ್ರಯಾನದ ರಾಕೆಟ್ ಉಡಾವಣೆಯಾಗುವಂತೆಯೇ ಈ ಮಾದರಿ ತಯಾರಾಗಿದ್ದು, ಸಾರ್ವಜನಿಕರ ಕೇಂದ್ರಬಿoದುವಾಗಿ ರೂಪುಗೊಂಡಿದೆ. ಪುಟ್ಟ ಗಣೇಶನನ್ನ ಪೂಜೆಗಾಗಿ ಇಡಲಾಗಿದ್ದು, ಅದರ ಪಕ್ಕದಲ್ಲೇ ‘ಸೈಂಟಿಸ್ಟ್ ಗಣೇಶ’ನನ್ನೂ ಇಡಲಾಗಿದೆ. ಅಲ್ಲದೇ ಚಂದ್ರಯಾನದ ಮಾಹಿತಿ ನೀಡುವಂತೆ ಸ್ಕ್ರೀನ್ ಗಳನ್ನೂ ಅಳವಡಿಸಿ, ಈ ಬಾರಿಯ ಗಣೇಶ ಚತುರ್ಥಿಯನ್ನ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಇಲ್ಲಿನ ಗಣೇಶೊತ್ಸವ ಆಚರಣೆಯ ವಿಶೇಷವಾಗಿದೆ.
ಹೌದು, ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ತೊಪ್ಪಲಕೇರಿಯಲ್ಲಿ ಸ್ನೇಹ ಯುವಕ ಸಂಘದಿoದ ಪ್ರತಿವರ್ಷ ಗಣಪತಿ ಮೂರ್ತಿಯನ್ನು ಕೂರಿಸಲಾಗುತ್ತಿದೆ. ಪ್ರತಿ ಬಾರಿಯೂ ವಿವಿಧ ಭಂಗಿಯ ಗಣೇಶನನ್ನ ಗ್ರಾಮದ ಯುವಕರೇ ತಂದು ಬಹಳ ಸುಂದರ ವೇದಿಕೆಗಳನ್ನ ತಯಾರಿಸಿ, ಅದ್ಧೂರಿಯಾಗಿ ಪೂಜಿಸಿ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದಾರೆ. ಪ್ರತಿ ಭಾರಿಯು ವಿಭಿನ್ನವಾಗಿ ಪ್ರಚಲಿತ ವಿದ್ಯಮಾನದ ಕುರಿತು ಸಂದೇಶ ಸಾರುವ ಇವರು ಈ ಬಾರಿಯ 35 ನೇ ವರ್ಷದ ಗಣೇಶೋತ್ಸವಕ್ಕೆ ವಿಶೇಷವಾಗಿ ತಯಾರಿಸಿರುವ ಚಂದ್ರಯಾನದ ಮಾದರಿ ಸಾರ್ವಜನಿಕರ ಗಮನಸೆಳೆಯುತ್ತಿದೆ.
ಕಳೆದ ಎರಡು ತಿಂಗಳ ಸತತ ಪರಿಶ್ರಮದಿಂದ ರಾಕೆಟ್ ಲಾಂಚಿoಗ್ ಮಾದರಿಯನ್ನು (chandrayaan 3 model) ಗಣೇಶ ಮಂಟಪದ ಬಳಿ ನಿರ್ಮಿಸಲಾಗಿದೆ. ಈ ಸಮೀತಿಯ ಸದಸ್ಯರು ಪ್ರತಿನಿತ್ಯ ತಮ್ಮ ತಮ್ಮ ಕೆಲಸಕಾರ್ಯವನ್ನು ಮುಗಿಸಿ ಸಂಜೆ ಮನೆಗೆ ಬಂದ ನಂತರ ಎಲ್ಲರು ಸೇರಿ ಕಳೆದ ಎರಡು ಎರಡು ತಿಂಗಳಿನಿoದ ರಾತ್ರಿ ಸಮಯದಲ್ಲಿ ರಾಕೆಟ್ ತಯಾರಿಸಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಿಸ್ಮಯ ಟಿವಿಯೊಂದಿಗೆ ಸಮೀತಿಯ ಸದಸ್ಯರಾದ ಮಾರುತಿ ನಾಯ್ಕ ಮಾತನಾಡಿ ನಾವು ಇಲ್ಲಿ ಚಿಕ್ಕದಾದ ರಾಕೇಟ್ ಮಾಡಿದ್ದೇವೆ, ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವ ಸಣ್ಣ ಪ್ರಯತ್ನ ನಮ್ಮದು, ಉರಿನವರೆಲ್ಲರು ಸೇರಿ ಮಾಡಿದ್ದೇವೆ,
ಪ್ರತಿನಿತ್ಯ ಕೆಲಸ ಮುಗಿಸಿ ಬಂದನoತರ ಸಂಜೆ ಎಲ್ಲರು ಸೇರಿ ಇದನ್ನು ನಿರ್ಮಿಸಲಾಗಿದೆ. ಕಳೆದ 34 ವರ್ಷದಿಂದಲು ಪ್ರಚಲಿತ ವಿದ್ಯಮಾನದೊಂದಿಗೆ ಗಣೇಶೋತ್ಸವ ಆಚರಿಸುತ್ತಾಬಂದಿದ್ದು, 1999 ರಲ್ಲಿಯು ನಮ್ಮ ಸಮಿತಿಯ ಸದಸ್ಯರು ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ಸೇನಾ ಟ್ಯಾಂಕರ ಮಾಡಿದ್ದರು. ನಂತರ ನೇರೆಯ ಸಂದರ್ಭದಲ್ಲಿ ನೆರೆಯ ಕುರಿತು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ