Important
Trending

ಪುರಾತನ ಶಿವ ದೇವಾಲಯದ ಅವಶೇಷಗಳಿಗೆ ಕಲ್ಲಿನಿಂದ ಹಾನಿ: ವಿಗ್ರಹ ಒಡೆದು ದುಷ್ಕೃತ್ಯ: ಕಿಡಿಗೇಡಿ ಯುವಕರ ಬಂಧನಕ್ಕೆ ಆಗ್ರಹ

ಹಳಿಯಾಳ: ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಪುಡಿಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಕಿಡಿಗೇಡಿ ಯುವಕರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕುರಿತು ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ವಿಶ್ವ ಹಿಂದೂ ಪರಿಷತ್ ಹಳಿಯಾಳ ಘಟಕ ಆಗ್ರಹಿಸಿದೆ. ಅಲ್ಲದೆ, ಈ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಸೆಪ್ಟೆಂಬರ್ 19 ರಂದು ದಾಂಡೇಲಿಯ ಕಿಡಿಗೇಡಿ ಯುವಕರ ಗುಂಪೊoದು ಸೂಪಾದ ಬಾಪೇಲಿ ಮುಳುಗಡೆ ಪ್ರದೇಶದಲ್ಲಿರುವ ಪುರಾತನ ಹಿಂದೂ ದೇವಾಲಯದ ವಿಗ್ರಹಗಳಿಗೆ ಹಾನಿ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೂಪಾ ಜಲಾಶಯದಲ್ಲಿ ನೀರು ಕಡಿಮೆಯಾದಾಗ ನೀರಿನಲ್ಲಿ ಮುಳಗಿಹೋಗಿದ್ದ ಶಿವ ದೇವಾಲಯದ ಅವಶೇಷಗಳು ಕಾಣಸಿಗುತ್ತವೆ. ಇದನ್ನು ನೋಡಲು ತೆರಳಿದ್ದ ಯುವಕರ ಗುಂಪೊoದು ಶಿವ ದೇವಾಲಯದ ಅವಶೇಷಗಳನ್ನು ಕಲ್ಲಿನಿಂದ ಒಡೆದು ಹಾಕಿದೆ. ಅಲ್ಲದೆ, ಇದನ್ನ ಚಿತ್ರೀಕರಣ ಮಾಡಿ ಹರಿಬಿಟ್ಟಿದೆ.

ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಹಿಂದೂ ಜನರ ಧಾರ್ಮಿಕ ಭಾವನೆಗೆ ದಕ್ಕೆ ತರುವಂತೆ ಹಿಂದೂ ಧರ್ಮ ಅವಮಾನಗೊಳಿಸುವ ಉದ್ದೇಶದಿಂದ ಈ ಕೃತ್ಯ ಕೈಗೊಂಡಿರುತ್ತಾರೆ. ಆದ ಕಾರಣ ತಾವುಗಳು ಕೂಡಲೇ ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಶಿಕ್ಷೆಗೆ ಒಳಪಡಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಸ್ಮಯ ನ್ಯೂಸ್, ಹಳಿಯಾಳ

Back to top button