Big NewsImportant
Trending

ಸಿಎಂ ಭೇಟಿ ಮಾಡಿದ ಪರೇಶ್ ಮೇಸ್ತ ತಂದೆ: ಮುಖ್ಯಮಂತ್ರಿ ಬಳಿ ಅಳಲು ತೋಡಿಕೊಂಡ ಕಮಲಾಕರ ಮೇಸ್ತ: ಮನವಿ ಸಲ್ಲಿಕೆ

ಮರು ತನಿಖೆಯ ಭರವಸೆ ನೀಡಿದ ಸಿಎಂ?

ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೆಸ್ತಾ ಸಾವಿನ ಪ್ರಕರಣವನ್ನು ಸಿಬಿಐನಿಂದ ಮರು ತನಿಖೆ ಮಾಡಿಸುವಂತೆ ಪರೇಶ್ ಮೆಸ್ತಾ ತಂದೆ ಕಮಾಲಾಕರ್ ಮೆಸ್ತಾ ಒತ್ತಾಯಿಸಿ, ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಕಮಲಾಕರ್ ಮೆಸ್ತಾ, ನನ್ನ ಮಗನ ಸಾವು ಅಸಹಜ ಸಾವಾಗಿದೆ ಎಂದು ಸಿಎಂ ಬಳಿ ಅಳಲುತೋಡಿಕೊಂಡಿದ್ದಾರೆ. ಸಿಬಿಐಗೆ ಸಾಕ್ಷಾಧಾರಗಳು ಲಭ್ಯ ಆಗಿಲ್ಲ ಎಂಬ ಕಾರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ ಎಂದು ಆರೋಪಿಸಿದ್ದಾರೆ.

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಕೃಷಿ ಕೆಲಸಗಾರ: ತೆಂಗಿನಕಾಯಿ ತೆಗೆಯುತ್ತಿದ್ದಾಗ ದುರ್ಘಟನೆ

ಸಿಬಿಐ ಬಿ ರಿಪೋರ್ಟ್ ಸಲ್ಲಿಸಿರುವುದರಿಂದ ನನಗೆ ನ್ಯಾಯ ಅನ್ಯಾಯವಾಗಿದೆ. ನನ್ನ ಮಗ ಪರೇಶ್ ಮೆಸ್ತಾನ ಪ್ರಕರಣವನ್ನು ಸಿಬಿಐಗೆ ನೀಡುವಾಗ 4 ತಿಂಗಳ ಅವಧಿ ಮೀರಿತ್ತು. ಬಹುತೇಕ ಸಾಕ್ಷಾಧಾರಗಳು ನಾಶವಾಗಿತ್ತು. ಹೀಗಾಗಿ ಮತ್ತಷ್ಟು ಆಳವಾದ ತನಿಖೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮನವಿ ಮಾಡಿಕೊಂಡರು.

ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ

ಪರಮೇಶ್ ಮೇಸ್ತಾ ತಂದೆ ಕಮಾಲಾಕರ್ ಮೆಸ್ತಾ ಅವರ ಮನವಿಯನ್ನು ಆಲಿಸಿದ ಸಿಎಂ ಬೊಮ್ಮಾಯಿ, ತಂದೆಯಾಗಿ ನಿಮ್ಮ ಕಷ್ಟವನ್ನು ಸರ್ಕಾರ ಅರ್ಥಮಾಡಿಕೊಳ್ಳುತ್ತದೆ. ಮನವಿಯನ್ನು ಪರಿಶೀಲಿಸಿ, ಪುನರ್ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ, ಶಾಸಕರಾದ ದಿನಕರ ಶೆಟ್ಟಿ ಮತ್ತು ಸುನಿಲ್ ನಾಯ್ಕ, ಕುಮಟಾ ಮಂಡಲದ ನಿಟಕ ಪೂರ್ವ ಅಧ್ಯಕ್ಷರಾದ ಕುಮಾರ ಮಾರ್ಕಾಂಡೆ, ಪರೇಶ ಮೇಸ್ತನ ತಮ್ಮನಾದ ರಾಹುಲ್ ಮೇಸ್ತ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Back to top button