Follow Us On

WhatsApp Group
Important
Trending

ಸುದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿ: ತವರಿಗೆ ಮರಳಿದ ವೀರಯೋಧನಿಗೆ ಅದ್ಧೂರಿಯಾಗಿ ಸ್ವಾಗತ

ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಗೌರವ

ಭಟ್ಕಳ: ತಮ್ಮ ಜೀವನದ ಅಮೂಲ್ಯವಾದ 15 ವರ್ಷ ಭಾರತಮಾತೆಯ ಸೇವೆ ಮಾಡಿ ತವರಿಗೆ ಮರಳಿದ ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ ದೇವಾಡಿಗರವರನ್ನು ಭಟ್ಕಳದ ದೇಶಪ್ರೇಮಿ ಬಂಧುಗಳು ತಾಲೂಕಿನ ಮುಖ್ಯವೃತ್ತದಲ್ಲಿ ಸಂಭ್ರಮ ಸಡಗರದಿಂದ ಬರಮಾಡಿಕೊಂಡರು. ಅವರು ಭಟ್ಕಳದ ಮುಖ್ಯವೃತ್ತಕ್ಕೆ ಆಗಮಿಸುತ್ತಿದ್ದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಯೋಧನಿಗೆ ಹಾರ ಹಾಕಿ, ಹೂಗೂಚ್ಛ ನೀಡಿ, ಯೋಧನ ಮೇಲೆ ಪುಷ್ಪಮಳೆಗೈದು ಸಂಭ್ರಮಿಸಿದರು. ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಯೋಧ ನಾಗರಾಜ ಇಂತಹದ್ದೊAದು ಸ್ವಾಗತ ದೊರಕ್ಕುತ್ತಿರುವುದು ನಿಜಕ್ಕೂ ಅತ್ಯಂತ ಹರ್ಷವೆನಿಸುತ್ತಿದೆ. ಇದು ಮತ್ತಷ್ಟು ಯುವಕರನ್ನು ಸೇನೆ ಸೇರಲು ಹುರಿದುಂಬಿಸುತ್ತದೆ ಎಂದರು. ಅoದಹಾಗೇ ನಿವೃತ್ತ ಯೋಧ ನಾಗರಾಜ ದೇವಾಡಿಗ ಭಟ್ಕಳ ತಾಲೂಕಿನ ಹೆಬ್ಳೆ ಗ್ರಾಮದ ಲಕ್ಷ್ಮೀ ಮತ್ತು ವೆಂಕ್ಟಯ್ಯ ದೇವಾಡಿಗ ದಂಪತಿಗಳ ಸುಪುತ್ರ… 29 ಜುಲೈ 2008ರಂದು ಭಾರತೀಯ ನೌಕಾಪಡೆಯನ್ನು ಸೇರಿ ದೇಶ ವಿದೇಶದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದು 31 ಜುಲೈ 2024 ರಂದು ನಿವೃತ್ತಿಯನ್ನು ಹೊಂದಿ, ಇದೀಗ ತವರಿಗೆ ಮರಳಿದ್ದಾರೆ.

ವಿಸ್ಮಯ ನ್ಯೂಸ್, ಈಶ್ವರ ನಾಯ್ಕ, ಭಟ್ಕಳ

Back to top button