Big NewsImportant
Trending

ಬೈಕ್ ಸವಾರರ ಬಳಿಕ ಇದೀಗ ಜಾನುವಾರುಗಳ ಮೇಲೆ ಚಿರತೆ ದಾಳಿ: ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ

ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ ಅರಣ್ಯ ಇಲಾಖೆ

ಹೊನ್ನಾವರ: ತಾಲೂಕಿನಲ್ಲಿ‌ ದಿನೇ ದಿನೇ ಚಿರತೆ ಭಯ ಹೆಚ್ಚುತ್ತಿದೆ. ಬೈಕ್ ಸವಾರರ ಮೇಲೆ ದಾಳಿ ಮಾಡಿದ‌ ಬೆನ್ನಲ್ಲೆ ಇದೀಗ ಚಿರತೆ, ಜಾನುವಾರುಗಳ‌ ಮೇಲೆ ದಾಳಿ ಮಾಡಿದೆ.

ತೆಂಗಿನ ಮರದಿಂದ ಬಿದ್ದು ಮೃತಪಟ್ಟ ಕೃಷಿ ಕೆಲಸಗಾರ: ತೆಂಗಿನಕಾಯಿ ತೆಗೆಯುತ್ತಿದ್ದಾಗ ದುರ್ಘಟನೆ

ಹೌದು, ತಾಲೂಕಿನ ಸಾಲ್ಕೋಡ್ ಭಾಗದಲ್ಲಿ ಚಿರತೆ ಕಾಟ ಜೊರಾಗಿದ್ದು, ಮೇಯಲು ಹೋದ ಜಾನುವಾರಿನ ಮೇಲೆ ದಾಳಿ ನಡೆಸಿದೆ. ಜಾನುವಾರಿನ ಮೇಲೆ‌ ಎರಗಿದೆ. ಆದರೆ ಜಾನುವಾರು ಹೇಗೋ ಚಿರತೆ ದಾಳಿಯಿಂದ ತಪ್ಪಿಸಿಕೊಂಡು ಬಂದಿದೆ., ಕೊಟ್ಟಿಗೆಗೆ ಬಂದ ದನವನ್ನು ಮಾಲೀಕರು ಗಮನಿಸಿದಾಗ ಚಿರತೆ ದಾಳಿ ಮಾಡಿರುವುದು ಬೆಳಕಿಗೆ ಬಂದಿದೆ.

ಸಾಲ್ಕೋಡಿನ ಸುತ್ತಮುತ್ತ ಇದೀಗ ಎಲ್ಲಡೆ ಚಿರತೆ ದಾಳಿ ಭಯ ಶುರುವಾಗಿದೆ. ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ವಾಹನಸವಾರರು ಓಡಾಡಲು ಹಿಂಜರಿಯುತ್ತಿದ್ದಾರೆ. ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Related Articles

Back to top button