Rat Fever: ಒಂದೇ ಸಮನೆ ಹೆಚ್ಚುತ್ತಿರುವ ಇಲಿ ಜ್ವರ: 34 ಮಂದಿಯಲ್ಲಿ ರೋಗ ಪತ್ತೆ
ಸಾರ್ವಜನಿಕರಲ್ಲಿ ಆತಂಕ
ಕಾರವಾರ: ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಜೊತೆ ಇದೀಗ ಇಲಿ ಜ್ವರದ (Rat Fever) ಭೀತಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು 34 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಜನರಿಗೆ ಸಕಲಾದಲ್ಲಿ ಈ ಬಗ್ಗೆ ಸೂಕ್ತ ಮಾಹಿತಿ ಸಿಗದ ಕಾರಣಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣ ಎನ್ನುವ ಆರೋಪಗಳು ಕೇಳಿಬರತೊಡಗಿದೆ.
ಹೌದು ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿoದ ಎಲ್ಲೆಡೆ ಜ್ವರದಿಂದಾಗಿ ಆಸ್ಪತ್ರೆಗಳಿಗೆ ಅಲೆದಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇಷ್ಟು ದಿನ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಗಳು ಪತ್ತೆಯಾಗುತ್ತಿದ್ದರಿಂದ ಜನ ಆತಂಕ್ಕೊಳಗಾಗುವoತಾಗಿತ್ತು. ಆದರೆ ಇದೀಗ ಇಲಿ ಜ್ವರದಂತಹ ಗಂಭೀರ ಪ್ರಕರಗಳು ಪತ್ತೆಯಾಗುತ್ತಿದ್ದು ಜನರಲ್ಲಿ ಮತ್ತಷ್ಟು ಭಯ ಹುಟ್ಟುವಂತೆ ಮಾಡಿದೆ.
ಜಿಲ್ಲೆಯಲ್ಲಿ ಈವರೆಗೆ ಸುಮಾರು 34 ಇಲಿ ಜ್ವರದ (Rat Fever) ಪ್ರಕರಗಳು ಪತ್ತೆಯಾಗಿದೆ. ಅದರಲ್ಲಿ ಅಂಕೋಲಾದಲ್ಲಿ 1, ಭಟ್ಕಳ 3, ಹೊನ್ನಾವರ 8, ಜೋಯಿಡಾ 1, ಕಾರವಾರದಲ್ಲಿ 8, ಕುಮಟಾ 7, ಶಿರಸಿ 3, ಸಿದ್ದಾಪುರ 3 ಪ್ರಕರಣಗಳು ಕಂಡುಬAದಿವೆ. ಅಲ್ಲದೆ ಇದೀಗ ಜ್ವರದಿಂದ ಆಸ್ಪತ್ರೆಗೆ ಅಲೆದಾಡುವವರ ಸಂಖ್ಯೆ ಹೆಚ್ಚಾದ ಕಾರಣ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.
ಕಾಯಿಲೆ ಇಲಿ ಮೂತ್ರದಿಂದ ಲೆಪ್ಟೊಸ್ಪಿರೋಸಿಸ್ ಹೊರಬಂದಾಗ ಅದು ಕುಡಿಯುವ ನೀರಿನ ಜೊತೆ ಅಥವಾ ಆಹಾರ ಪದಾರ್ಥಗಳ ಜೊತೆ ಸೇರಿ ಕಲುಷಿತಗೊಳ್ಳುತ್ತದೆ. ಒಂದೊಮ್ಮೆ ಅದನ್ನು ಮನುಷ್ಯ ಸೇವನೆ ಮಾಡಿದ್ದಲ್ಲಿ ವೈರಸ್ ಹರಡಿ ಇಲಿ ಜ್ವರಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಹೀಗೆ ಹರಡಿದಲ್ಲಿ ವ್ಯಕ್ತಿಗೆ ಅತೀಯಾದ ಜ್ವರ, ಮೈ ಕೈ ನೋವು, ಮೂಗು ಬಾಯಿಯಲ್ಲಿ ರಕ್ತ ಸ್ರಾವ ಆಗಲಿದೆ. 20 ದಿನಗಳಾದರು ಜ್ವರ ವಾಸಿಯಾಗದೆ ತೊಂದರೆ ಕಂಡುಬರುತ್ತದೆ. ಇನ್ನು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯಕೀಯ ಪರೀಕ್ಷೆ ಮಾಡಿಸುವ ಮೂಲಕ ಚಿಕಿತ್ಸೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯಾಧೀಕಾರಿ ಡಾ.ನೀರಜ್ ಬಿ.ವಿ ಮಾಹಿತಿ ನೀಡಿದ್ದಾರೆ.
ಇನ್ನು ಮನಷ್ಯನಲ್ಲಿ ಎರಡನೇ ಭಾರಿ ಇಲಿ ಜ್ವರ ಪತ್ತೆಯಾದರೆ ಅದು ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇದರಿಂದ ಲಿವರ್ ಡ್ಯಾಮೇಜ್, ಜಾಂಡೀಸ್, ಕಿಡ್ನಿ ವೈಪಲ್ಯ, ಮೆದಳು ಜ್ವರ ಬಂದು ಮನುಷ್ಯ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಇದರಿಂದ ಜನರು ಸಣ್ಣ ಜ್ವರ ಎಂದು ನಿರ್ಲಕ್ಷ್ಯ ಮಾಡದೆ, ಜ್ವರ ಎಂದು ಗೊತ್ತಾದ ತಕ್ಷಣ ವೈದ್ಯರ ಬಳಿ ಹೋಗಿ ರಕ್ತ ಪರೀಕ್ಷೆ ಮಾಡಿಸುವ ಮೂಲಕ ರೋಗ ಯಾವುದೆಂದು ಮೊದಲು ಪತ್ತೆಹಚ್ಚಿ ಸೂಕ್ತ ಪಡೆಯಬೇಕು. ಇದರಿಂದ ಮುಂದಾಗುವ ಅನಾಹುತ ತಪ್ಪಿಸಬಹುದು ಎಂದು ಆರೋಗ್ಯಾಧಿಕಾರಿ ಸಲಹೆ ನೀಡಿದ್ದಾರೆ.
ಇನ್ನು ರೋಗ ತಡೆಯುವ ನಿಟ್ಟಿನಲ್ಲಿ ನೀರನ್ನು ಕುದಸಿ ಕುಡಿಯಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಟ್ಟು ಸೇವನೆ ಮಾಡಬೇಕು. ಪಾದ ರಕ್ಷೆ ಹಾಕಿಕೊಂಡು ಹೊರಗಡೆ ಓಡಾಡಬೇಕು. ಊಟ ಅಥವಾ ಯಾವುದೇ ತಿಂಡಿ ತಿನ್ನಿಸುಗಳನ್ನು ತಿನ್ನುವ ಮುನ್ನ ಕೈ ತೊಳೆದುಕೊಂಡು ತಿನ್ನಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ಜ್ವರದಿಂದ ಬಳಲುವವರು ಚಿಕಿತ್ಸೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿರುವುದು ಕಂಡುಬರುತ್ತಿದೆ. ಅದರಲ್ಲಿಯೂ ಒಂದೇ ಮನೆಯವರಿಗೆ ಒಬ್ಬರಿಂದ ಒಬ್ಬರಿಗೆ ಹರಡಿ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೀಗ ಜಿಲ್ಲೆಯಲ್ಲಿ ಇಲಿ ಜ್ವರದಂತಹ ಪ್ರಕರಗಳು ಹೆಚ್ಚಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಕೂಡ ಕಾರಣವಾಗಿದೆ.
ಜನರಿಗೆ ಸೂಕ್ತ ಸಮಯದಲ್ಲಿ ಜ್ವರದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ಇಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ. ಜೊತೆಗೆ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ, ರಕ್ತ ಪರೀಕ್ಷೆ ಮಾಡುವ ಉಪಕರಣಗಳು ಇಲ್ಲ. ಇಂತಹ ಹತ್ತು ಹಲವು ಕಾರಣಗಳಿಂದ ಜಿಲ್ಲೆಯಲ್ಲಿ ಸೂಕ್ತ ಆರೋಗ್ಯ ಸೇವೆ ಸಿಗದ ಪರಿಸ್ಥಿತಿ ಇದೆ.
ಕೂಡಲೇ ಈ ಬಗ್ಗೆ ಆರೋಗ್ಯ ಇಲಾಖೆ ನಿರ್ಲಕ್ಷ್ಯ ಮಾಡದೆ ಜನರ ಆರೋಗ್ಯದ ದೃಷ್ಟಿಯಿಂದ ಯಾವುದೇ ಕಾಯಿಲೆ ಅಥವಾ ರೋಗ ಹರಡಿದಾಗ ಕಾಟಾಚಾರಕ್ಕೆ ಪ್ರಚಾರ ಮಾಡಿ ಕೈ ಬಿಡದೆ ಜನರಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಜನರನ್ನು ರಕ್ಷಣೆ ಮಾಡಬೇಕು ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್, ಕಾರವಾರ