Important
Trending

ದನ ತಪ್ಪಿಸಲು ಹೋಗಿ ಪಲ್ಟಿಯಾದ ಆಟೋ: ಚಾಲಕ ಸಾವು

ಭಟ್ಕಳ: ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋದ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಹಿನ್ನೆಲೆ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಸಾವನಪ್ಪಿರುವ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ ಮೃತ ಆಟೋ ಚಾಲಕ, ನಾಗೇಶ ಕೃಷ್ಣ ಗೊಂಡ ಎಂದು ತಿಳಿದು ಬಂದಿದೆ.

ಈತ ಭಟ್ಕಳ ಕಡೆಯಿಂದ ಮಾರುಕೇರಿ ಕಡೆಗೆ ಅತೀವೇಗ ಹಾಗೂ ಅಜಾಗರುಕತೆಯಿಂದ ಆಟೋ ಚಲಾಯಿಸಿಕೊಂಡು ಬಂದಿದ್ದು, ಕೊಟಖಂಡ ಸಮೀಪ ರಸ್ತೆಗೆ ದನ ಅಡ್ಡ ಬಂದ ಹಿನ್ನೆಲೆ ದನವನ್ನು ತಪ್ಪಿಸಲು ಹೋಗಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಆಟೋ ಪಲ್ಟಿಯಾಗಿದೆ. ಅಪಘಾತದಲ್ಲಿ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ವೇಳೆ ಗೊರಟೆ ಕ್ರಾಸ್ ಸಮೀಪ ಸಾವನ್ನಪ್ಪಿದ್ದಾನೆ. ಆಟೋ ಹಿಂಬದಿಯಲ್ಲಿದ್ದ ನಾಗರಾಜ ನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ವಿಷಯವನ್ನು ತಿಳಿದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ನೂರಾರು ಜನರು ಮೃತನ ಅಂತಿಮ ದರ್ಶನ ಪಡೆದುಕೊಂಡರು ಹಾಗೂ ಭಟ್ಕಳ ಆಟೋ ಚಾಲಕರ ಸಂಘದಿoದ ಸಂತಾಪ ಸೂಚಿಸಲಾಯಿತು. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button