Big News
Trending

ರಾಜ್ಯ ಹೆದ್ದಾರಿ ಸೇತುವೆ ಪಕ್ಕ ಅಪಾಯಕಾರಿ ಜೇನುಗೂಡು: ಅಪಾಯವಾಗುವ ಮುನ್ನ ಜೇನುಗೂಡು ತೆರವಿಗೆ ತೆಗೆದುಕೊಳ್ಳಬೇಕಿದೆ ಕ್ರಮ

ಅಂಕೋಲಾ: ಅಪಾಯವಾಗುವ ಮುನ್ನ ಜೇನುಗೂಡು ತೆರವಿಗೆ ತೆಗೆದುಕೊಳ್ಳಬೇಕಿದೆ ಕ್ರಮ. ಅಂಕೋಲಾ: ರಾಜ್ಯ ಹೆದ್ದಾರಿ ಸೇತುವೆ ಒಂದರ ಪಕ್ಕ, ಒಳ ರಸ್ತೆಗೆ ಹೊಂದಿಕೊಂಡಿರುವ ಮರದ ಕೊಂಬೆಗೆ ಹೆಜ್ಜೇನು ಗೂಡು ಕಟ್ಟಿದ್ದು,ರಸ್ತೆ ಸಂಚಾರಿಗಳು ಆತಂಕದಿಂದಲೇ ಪಯಣಿಸುವಂತಾಗಿದೆ. ಅಂಕೋಲಾ – ಮಂಜಗುಣಿ ಮುಖ್ಯ ರಸ್ತೆಯ, ದಾರಿಮಧ್ಯೆ ಪೂಜಗೇರಿ ಹಳ್ಳದ ಸೇತುವೆ ಹತ್ತಿರದ ಪ್ರದೇಶದಲ್ಲಿ ಹೆಜ್ಜೇನು ಗೂಡು ಕಂಡುಬಂದಿದೆ.ದಿನನಿತ್ಯ ಇಲ್ಲಿ ಹತ್ತಾರು ಶಾಲಾ ಕಾಲೇಜು ವಾಹನಗಳು, ಬೆಳಂಬಾರ, ಹೊನ್ನೆಬೈಲ್,ಶೇಟಗೇರಿ, ಬಬ್ರುವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಹಳ್ಳಿಗರು ತಮ್ಮ ದಿನನಿತ್ಯದ ಕೆಲಸಕ್ಕೆ ಇದೇ ದಾರಿಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಇದೆ.

ಅಂಕೋಲಾದಿಂದ ಗೋಕರ್ಣ ಸೇರುವ ಅತಿ ಕಡಿಮೆ ದೂರದ ಮುಖ್ಯ ರಸ್ತೆಯು ಇದಾಗಿದ್ದು , ನಾನಾ ಕಾರಣಗಳಿಂದ ಈ ರಾಜ್ಯ ಹೆದ್ದಾರಿ ಸಂಚಾರ ನಿಬಿಡವಾಗಿದೆ., ಒಂದೊಮ್ಮೆ ಪಕ್ಷಿಗಳು ಕುಕ್ಕಿಇಲ್ಲವೇ ಇನ್ನಿತರೇ ಕಾರಣಗಳಿಂದ ಜೇನು ಹುಳುಗಳು ರೊಚ್ಚಿಗೆದ್ದು ದಾಳಿ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಸ್ಥಳೀಯರು. ಆದ್ದರಿಂದ ಅಪಾಯವಾಗುವ ಮುನ್ನ ಸಂಭಧಿತ ಇಲಾಖೆಗಳು ಎಚ್ಚೆತ್ತುಕೊಂಡು, ಜೇನು ಗೂಡು ತೆರವು ಗೊಳಿಸಿ ಸಂಭವನೀಯ ಅಪಾಯ ತಪ್ಪಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button