Important
Trending

ಐಷಾರಾಮಿ ಕಾರಿನಲ್ಲಿ ಬಂದು ಗೋ ಕಳ್ಳತನ: ಬೆಳ್ಳಂಬೆಳಿಗ್ಗೆ ರಸ್ತೆಯಲ್ಲಿದ್ದ ಗೋವುಗಳನ್ನು ತುಂಬಿದ ದುರುಳರು

ಸಿಸಿಟಿವಿಯಲ್ಲಿ ಸೆರೆಯಾಗಿದೆ ಕಳ್ಳತನದ ಸಂಪೂರ್ಣ ದೃಶ್ಯ

ಹೊನ್ನಾವರ: ಐಷಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ಗೋ ಕಳ್ಳತನ (cow theft) ಮಾಡಿಕೊಂಡುಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ರಸ್ತೆಯ ಸನಿಹದಲ್ಲಿದ್ದ ಗೋವುಗಳನ್ನು ಕಾರಿನಲ್ಲಿ ತುಂಬಿಕೊoಡು ಎಸ್ಕೇಪ್ ಆದ ಕಳ್ಳತನದ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯತ ವ್ಯಾಪ್ತಿಯ ಪಟ್ಟಣಕ್ಕೆ ಹೊಂದಿಕೊoಡಿರುವ ಮೂರುಕಟ್ಟೆ ಹತ್ತಿರ ಈ ಘಟನೆ ನಡೆದಿದೆ .

ಚಂದ್ರಶೇಖರ್ ಮೇಸ್ತ ಎನ್ನುವವರಿಗೆ ಸೇರಿದ 3 ಜಾನುವಾರು ಕಳ್ಳತನ (cow theft) ಆಗಿದೆ ಎನ್ನುವ ಮಾಹಿತಿ ವಿಸ್ಮಯ ಟಿ.ವಿಗೆ ಲಭಿಸಿದೆ. ಇತ್ತಿಚಿನ ದಿನಗಳಲ್ಲಿ ಗೋವುಗಳ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಅದರಲ್ಲೂ ಬೆಳಗಿನ ಜಾವ ಕಾರುಗಳಲ್ಲಿ ಬಂದು ದನಗಳನ್ನು ಕಳವು ಮಾಡುತ್ತಿರುವ ಘಟನೆ ಎಲ್ಲೆಡೆ ಕಂಡುಬರುತ್ತಿದೆ. ಗೋ ಪ್ರೇಮಿಗಳು ಇದರಿಂದ ಆತಂಕಗೊoಡಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button