Job News
Trending

Temple Jobs :ಇಡಗುಂಜಿ ದೇವಾಲಯದಲ್ಲಿ 7 ಹುದ್ದೆಗಳಿಗೆ ನೇಮಕಾತಿ:ಪಿಯುಸಿ, ಪದವಿ ಆದವರು ಅರ್ಜಿ ಅರ್ಜಿ ಸಲ್ಲಿಸಿ

ಕಾರವಾರ: ರಾಜ್ಯದ ಪ್ರಸಿದ್ಧ ದೇವಸ್ಥಾನಗಳಲ್ಲಿ ಒಂದಾದ ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಟ್ಟಿರುವ ಹೊನ್ನಾವರ ತಾಲೂಕಿನ ಇಡಗುಂಜಿಯ ಮಹಾಣಗಪತಿ ಒಟ್ಟು ಏಳು ಹುದ್ದೆಗಳಿಗೆ (Temple Jobs) ನೇಮಕಾತಿ ನಡೆಯಲಿದೆ. ದೇವಾಲಯದಲ್ಲಿ ಸಹಾಯಕ ಕಾರ್ಯನಿರ್ವಾಹಕ, ಮುಖ್ಯ ಲೆಕ್ಕಿಗ, ಮೇಲ್ವಿಚಾರಕ, ಗುಮಾಸ್ತ ಸೇರಿದಂತೆ ಒಟ್ಟು 7 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ಕಾರ್ಯನಿರ್ವಾಹಕ ಮುಖ್ಯ ಲೆಕ್ಕಿಗ ಹುದ್ದೆಗೆ ಬಿಕಾಂ ಪದವಿ, ಟ್ಯಾಲಿ ಮತ್ತು ಕಂಪ್ಯೂಟರ್ ಡಾಟಾ ಎಂಟ್ರಿ ತರಬೇತಿ ಹೊಂದಿರಬೇಕು. ಮೇಲ್ವಿಚಾರಕ ಮತ್ತು ಗುಮಾಸ್ತ ಹುದ್ದೆಗಳಿಗೆ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಸ್ವಚ್ಛತೆಗಾರ ಹುದ್ದೆಗೆ ಎಂಟನೇ ತರಗತಿ ಪಾಸ್ ಆಗಿರಬೇಕು. ಈ ಎಲ್ಲಾ ಹುದ್ದೆಗಳಿಗೆ ವಯೋಮಿತಿ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 40 ವರ್ಷದ ಒಳಗಿರಬೇಕು ಎಂದು ಮಾಹಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಅಂದವಾದ ಕೈಬರಹದಲ್ಲಿ ಅಥವಾ ಟೈಪ್ ಮಾಡಿದ ಅರ್ಜಿಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ ಇಲ್ಲಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು. ಬಯೋಡೇಟಾ, ಮೊಬೈಲ್ ಸಂಖ್ಯೆ, ಅಂಕಪಟ್ಟಿ ಮತ್ತಿತರ ದಾಖಲಾತಿಗಳ ದೃಢೀಕೃತ ಪ್ರತಿಗಳು ಮತ್ತು ಇತ್ತೀಚಿನ ಪಾಸ್ಪೋರ್ಟ್ ಅಳೆಯ ಭಾವಚಿತ್ರಗಳೊಂದಿಗೆ ಅಕ್ಟೋಬರ್ 21 ರ ಸಂಜೆ 5 ಗಂಟೆ ಒಳಗಾಗಿ ತಲುಪಿಸುವಂತೆ ತಿಳಿಸಲಾಗಿದೆ.

ಹುದ್ದೆವಿದ್ಯಾರ್ಹತೆ
ಸಹಾಯಕ ಕಾರ್ಯನಿರ್ವಾಹಕಬಿಕಾಂ ಪದವಿ
ಮುಖ್ಯ ಲೆಕ್ಕಿಗಬಿಕಾಂ ಪದವಿ
ಮೇಲ್ವಿಚಾರಕ ಮತ್ತು ಗುಮಾಸ್ತಪಿಯುಸಿ
ಸ್ವಚ್ಛತೆಗಾರಎಂಟನೇ ತರಗತಿ

(Temple Jobs) ಅಕ್ಟೋಬರ್ 29 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಸಂದರ್ಶನಕ್ಕೆ ಪ್ರತ್ಯೇಕ ನೋಟಿಸ್ ಅಥವಾ ಪತ್ರವನ್ನು ಕಳುಹಿಸಲಾಗುವುದಿಲ್ಲ. ಅನಿವಾರ್ಯ ಕಾರಣಗಳಿಂದ ಸಂದರ್ಶನದ ದಿನಾಂಕವನ್ನು ರದ್ದುಗೊಳಿಸಿದರೆ ಅಥವಾ ಮುಂದೂಡಿದರೆ ಅದರ ಸೂಚನೆಯನ್ನು ಜಿಲ್ಲಾ ನ್ಯಾಯಾಲಯದ ಸೂಚನಾ ಫಲಕದಲ್ಲಿ ಮತ್ತು ಶ್ರೀ ಇಡಗುಂಜಿ ದೇವಸ್ಥಾನದ ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗುವುದು ಎಂದು ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಒಟ್ಟು ಹುದ್ದೆಗಳು7
ಇಲಾಖೆಮುಜರಾಯಿ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕಅಕ್ಟೋಬರ್ 21
ಸoದರ್ಶನ ದಿನಾಂಕಅಕ್ಟೋಬರ್ 29 ರಂದು ಬೆಳಿಗ್ಗೆ 10 ಗಂಟೆ
ಅರ್ಜಿ ಸಲ್ಲಿಸಬೇಕಾದ ವಿಳಾಸಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಾರವಾರ

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಂದೇಶ್ ಎನ್ ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button