ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ವಿಶೇಷ ಹೂವಿನ ಪೂಜೆ: ವಿವಿಧ ಪುಷ್ಪಗಳಿಂದ ಭವ್ಯ ಅಲಂಕಾರ
ಕುಮಟಾ: ಗ್ರಾಮ ದೇವತೆ ದೇವರಹಕ್ಕಲದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಪ್ರತಿ ವರ್ಷದ ಅತ್ಯಂತ ವಿಜೃಂಭಣೆಯಿAದ ನಡೆಸುವ ವಿಶೇಷ ಹೂವಿನ ಪೂಜೆಯು ಎಲ್ಲರ ಗಮನ ಸೆಳೆಯಿತು. ವಿವಿಧ ಪುಷ್ಪಗಳಿಂದ ಅಲಂಕೃತಳಾದ ತಾಯಿ ಶ್ರೀ ಶಾಂತಿಕಾ ಪರಮೇಶ್ವರಿಯನ್ನು ಭಕ್ತರು ಕಣ್ತುಂಬಿಕೊoಡರು. ಗ್ರಾಮ ದೇವಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಹೂವಿನ ಪೂಜೆಯು ಅತ್ಯಂತ ಅದ್ಧೂರಿಯಾಗಿ ನಡೆಯಿತು.
ಶಾಂತಿಕಾ ಭಕ್ತ ಮಂಡಳಿ ಹಾಗೂ ಶಾಂತಿಕಾ ಮಿತ್ರ ಮಂಡಳಿಯ ವತಿಯಿಂದ ಪುಷ್ಪಾಲಂಕಾರ ಸೇವಯು ನಡೆದುಕೊಂಡು ಬಂದಿದ್ದು, ಅದೇ ರೀತಿಯಾಗಿ ಈ ವರ್ಷವೂ ಸಹ ಎಲ್ಲರ ಗಮನ ಸೆಳೆಯುವ ರೀತಿಯಲ್ಲಿ ದೇವಾಲಯನ್ನು ಹಾಗೂ ಶ್ರೀ ಶಾಂತಿಕಾ ಪರಮೇಶ್ವರಿಯನ್ನು ಅಲಂಕರಿಸಲಾಗಿತ್ತು.
ಈ ಸಂಬAಧ ದೇವಾಲಯದ ಅರ್ಚಕರಾದ ರಾಜು ಗುನಗಾ ಅವರು ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿ, ಶಾಂತಿಕಾ ಭಕ್ತ ಮಂಡಳಿ ಹಾಗೂ ಶಾಂತಿಕಾ ಮಿತ್ರ ಮಂಡಳಿಯ ವತಿಯಿಂದ ದೇವಾಲಯದ ದರ್ಮದರ್ಶಿಗಳ ಪ್ರೋತ್ಸಾಹದಿಂದ ಪ್ರತಿ ವರ್ಷದಂತೆ ಈ ವರ್ಷವೂ ಹೂವಿನ ಪೂಜೆಯು ಧಾರ್ಮಿಕ ವಿಧಿ ವಿಧಾನದಂತೆ ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳ ಕೂಡುವಿಕೆಯಲ್ಲಿ ಸಂಪನ್ನಗೊAಡಿದೆ ಎಂದು ತಿಳಿಸಿದರು.
ಒಟ್ಟಾರೆ ಈ ವರ್ಷದ ಹೂವಿನ ಪೂಜೆಯು ವಿಜೃಂಬಣೆಯಿAದ ಸಂಪನ್ನಗೊAಡಿತು. ಕುಮಟಾ ಪಟ್ಟಣ ಸೇರಿದಂತೆ ವಿವಿದೆಡೆಯಿಂದ ಆಗಮಿಸಿದ ಭಕ್ತರು ಶ್ರೀ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ಇಷ್ಠಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ಅದೇ ರೀತಿ ಹೂವಿನ ಅಲಂಕಾರವು ಎಲ್ಲರ ಗಮನ ಸೆಳೆಯಿತು.
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ