ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದು ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗುತ್ತಿದ್ದ ಮೂವರನ್ನು ಲೈಫ್ ಗಾರ್ಡ್ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ. ರಕ್ಷಣೆ ಮಾಡಿದ ಪ್ರವಾಸಿಗರನ್ನು ಸಿದ್ದಾರ್ಥ ,ದೀಕ್ಷಿತ ಹಾಗೂ ಸಂತೋಷ ಎಂದು ತಿಳಿದುಬಂದಿದ್ದು, ಇವರು ಹಾವೇರಿ ಜಿಲ್ಲೆಯ ಹಂಸಬಾವಿ ಮೂಲದವರು.
ಇವರು 5 ಜನರ ತಂಡದೊoದಿಗೆ ಹಾವೇರಿ ಜಿಲ್ಲೆಯಿಂದ ಮೊದಲು ಧರ್ಮಸ್ಥಳಕ್ಕೆ ಬಂದಿದ್ದು, ಅಲ್ಲಿ ದೇವರ ದರ್ಶನ ಮುಗಿಸಿ ಬಳಿಕ ಮುರುಡೇಶ್ವರಕ್ಕೆ ಬಂದಿದ್ದಾರೆ. ನಂತರ ಮುರುಡೇಶ್ವರದಲ್ಲಿ ದೇವರ ದರ್ಶನ ಮುಗಿಸಿದ ಇವರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಮೂವರು ಯುವಕರು ಸಮುದ್ರದಲ್ಲಿ ಮುಳುಗುತ್ತಿರುದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿಗಳು ತಕ್ಷಣ ಸುಮುದ್ರಕ್ಕಿಳಿದು ಮೂವರು ಯುವಕರನ್ನು ರಕ್ಷಣೆ ಮಾಡಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಚಂದ್ರಶೇಖರ ದೇವಾಡಿಗ, ಜಯರಾಮ, ಪಾಂಡು, ಹನುಮಂತ ಹಾಗೂ ಬೀಚ್ ಮೇಲ್ವಿಚಾರಕ ದತ್ತಾತ್ರೇಯ ಶೆಟ್ಟಿ ಪಾಲ್ಗೊಂಡಿದ್ದರು . ಮುರುಡೇಶ್ವರ ಸಮುದ್ರ ತೀರಕ್ಕೆ ತೆರಳಲು ನಿರ್ಬಂಧ ತೆರವುಗೊಳಿಸಿದ ಬಳಿಕ ಇದು ಮೊದಲ ಪ್ರಕರಣವಾಗಿದೆ .
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ