ಯಲ್ಲಾಪುರ: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲೂಕಿನ ತಟಗಾರ ಕ್ರಾಸ್ ಬಳಿಯ ಶಾನಭಾಗ ಹೊಟೆಲ್ ಎದುರಿನಲ್ಲಿ ನಡೆದಿದೆ. ಅತೀವೇಗದಿಂದ ಬಂದ ಬೈಕ್, ಕಾರಿಗೆ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ಬೈಕಿನಲ್ಲಿ ಇದ್ದ ಇಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ತಾಲೂಕಿನ ಹುಣಸೆಕೊಪ್ಪದ ರಾಜು (16) ಮತ್ತು ರಾಮನಕೊಪ್ಪದ ದರ್ಶನ ಭಂಡಾರಿ (16)ಎಂದು ಗುರುತಿಸಲಾಗಿದೆ.
ಇನ್ನೋರ್ವ ಸವಾರ ಜಾಬೀರ್ (17) ಗಂಭೀರವಾಗಿ ಗಾಯಗೊಂಡಿದ್ದಾನೆ. ಅಪಘಾತದ ವಿಡಿಯೋ ಶಾನಭಾಗ ಹೊಟೇಲ್ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರನ್ನು ತಿರುಗಿಸುತ್ತಿರುವ ವೇಳೆ ಅತಿವೇಗದಿಂದ ಬೈಕ್, ಕಾರಿಗೆ ಡಿಕ್ಕಿಹೊಡೆದಿದೆ. ಈ ವೇಳೆ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ದುರ್ಘಟನೆ ಸಂಭವಿಸಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.
ವಿಸ್ಮಯ ನ್ಯೂಸ್, ಯಲ್ಲಾಪುರ