Important
Trending

ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬ್ಯಾಂಕ್‌ ಕ್ಯಾಶಿಯರ್ ಚಿಕಿತ್ಸೆ ಫಲಿಸದೆ ನಿಧನ

ಹೊನ್ನಾವರ: ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕೆನರಾ ಬ್ಯಾಂಕ್‌ ಕ್ಯಾಶಿಯರ್ ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೃಷ್ಣಮೂರ್ತಿ ಕೆ.ನಾಯ್ಕ ಎನ್ನುವವರೆ ಮೃತಪಟ್ಟ ದುರ್ದೈವಿ. ಇವರು ತಾಲೂಕಿನ ಚಂದಾವರ ಸಮೀಪ ಬೈಕ್ ನಿಂದ ಬಿದ್ದಿದ್ದು, ಪರಿಣಾಮವಾಗಿ ತಲೆಗೆ ಗಂಭೀರ ಗಾಯವಾಗಿತ್ತು. ತೀವ್ರ ರಕ್ತಸ್ರಾವ ಆಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ, ಇದೀಗ ಹೆಚ್ಚಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button