Important
Trending

ಹಿಂಬದಿಯಿoದ ಬರುತ್ತಿದ್ದ ಟೆಂಪೋ ಡಿಕ್ಕಿ: ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬಡಿದು ಫೋಟೋಗ್ರಾಫರ್ ಸಾವು

ಕಾರವಾರ: ಬೈಕ್ ಮತ್ತು ಟೆಂಪೋ ನಡುವೆ ಅಪಘಾತವಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಅಮದಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕುಮಟಾದಲ್ಲಿ ಫೊಟೊಗ್ರಾಫರ್ ಆಗಿರುವ ಮಹಾಬಲೇಶ್ವರ ಅಂಬಿಗ ಮೃತಪಟ್ಟ ದುರ್ದೈವಿ. ಬೈಕ್‌ನಲ್ಲಿ ಸಾಗುತ್ತಿದ್ದ ಮಹಾಬಲೇಶ್ವರ ತಿರುವಿನಲ್ಲಿ ಬೈಕ್ ತಿರುಗಿಸುವಾಗ ದುರ್ಘಟನೆ ನಡೆದಿದೆ.

ಬೈಕ್ ಕದ್ದವನನ್ನು 24 ತಾಸಿನಲ್ಲಿ ವಶಕ್ಕೆ ಪಡೆದ ಪೊಲೀಸರು | 22 ರ ಪೋರನ ಮೇಲೆ ದಾಖಲಾಗಿದೆಯಂತೆ ಒಟ್ಟೂ 21 ಕೇಸ್!

ಬೈಕ್‌ನ ಹಿಂದೆ ಬರುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣಕ್ಕೆ ಸಿಗದೆ ಮುಂದೆ ಮಹಾಬಲೇಶ್ವರ ಅವರ ಬೈಕ್‌ಗೆ ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಮಹಾಬಲೇಶ್ವರ ಸಿನಿಮಿಯ ರೀತಿಯಲ್ಲಿ ಬೈಕ್ ಸಮೇತ ಹಾರಿ ಎದುರು ಚಲಿಸುತ್ತಿದ್ದ ಕಾರಿಗೆ ಬಡಿದು ರಸ್ತೆಗೆ ಬಿದ್ದಿದ್ದಾರೆ ಎನ್ನಲಾಗಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಹಾಬಲೇಶ್ವರ, ಕ್ರಿಮ್ಸ್ ಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಶಾಸಕಿ ರೂಪಾಲಿ ನಾಯ್ಕ ಸ್ಥಳದಲ್ಲೇ ಕೆಲ ಕಾಲ ನಿಂತು ಆಸ್ಪತ್ರೆಗೆ ಕರೆ ಮಾಡುವಲ್ಲಿ ಸಹಕರಿಸಿದರು. ಆದರೆ ಅಂಬ್ಯುಲೆನ್ಸ್ ಸ್ಥಳಕ್ಕೆ ಬರುವುದು ವಿಳಂಬವಾದ ಕಾರಣ ಶಾಸಕಿ ಐಆರ್‌ಬಿ ವಾಹನವನ್ನ ತುರ್ತಾಗಿ ಕರೆಯಿಸಿ ಸ್ಥಳಕ್ಕೆ ಕರೆಯಿಸಿ, ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Related Articles

Back to top button