Follow Us On

WhatsApp Group
Important
Trending

ಮುರ್ಡೇಶ್ವರದ ಸಮುದ್ರದಲ್ಲಿ ಮುಳುಗಿ ಇಬ್ಬರು ಪ್ರವಾಸಿಗರ ಸಾವು

ಭಟ್ಕಳ: ಮುರುಡೇಶ್ವರಕ್ಕೆ ಆಗಮಿಸಿದ್ದ ಎರಡು ವಿಭಿನ್ನ ಗುಂಪಿಗೆ ಸೇರಿದ ಇಬ್ಬರು ಯುವಕರು ಒಂದೇ ದಿನ ಸಮುದ್ರ ಪಾಲಾಗಿರುವ ಘಟನೆ ಮುರುಡೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಇಬ್ಬರು ಕೂಡ ಬಾಗಲಕೋಟೆ ಜಿಲ್ಲೆಯವರೆಂದು ತಿಳಿದು ಬಂದಿದೆ.ಅವರಲ್ಲಿ ಓರ್ವ ಮಂಜುನಾಥ ರಮೇಶ ಹಡಪದ(25) ಬಾಗಲಕೋಟೆ ಜಿಲ್ಲೆಯ ನೀರ ಬೂದಿಹಾಳನವನಾಗಿದ್ದು, ಹಾಲಿ ನವನಗರದಲ್ಲಿ ವಾಸವಾಗಿದ್ದನು. ಈತ ತನ್ನ ಕುಟುಂಬದವರೊOದಿಗೆ ಮುರುಡೇಶ್ವ ಪ್ರವಾಸಕ್ಕೆ ಬಂದ ವೇಳೆ ಕುಟುಂಬ ಸದಸ್ಯರೊಂದಿಗೆ ಸಮುದ್ರದಲ್ಲಿ ಈಜುತ್ತಿದ್ದ ವೇಳೆ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇನ್ನೋರ್ವ ಕ್ರಷ್ಣಪ್ಪ ಕರಿಯಪ್ಪ ಹರಕಂಗಿ ಕೂಡಾ (18 )ಬಾಗಲಕೋಟೆ ಜಿಲ್ಲೆಯ ಲೋಕಾಪುರ ನಿವಾಸಿ. ಈತ ತನ್ನ ಧಾರವಾಡ ಮೂಲದ ನಾಲ್ಕು ಜನ ಸ್ನೇಹಿತರೊಂದಿಗೆ ಮುರುಡೇಶ್ವ ಪ್ರವಾಸಕ್ಕೆ ಬಂದಿದ್ದು, ಮೊದಲು ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಆಟವಾಡುತ್ತಿದ್ದ. ನಂತರ ದೇವಸ್ಥಾನದ ಎಡ ಬದಿಯ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾನೆ. ಈ ಕುರಿತು ಮುರುಡೇಶ್ವ ಪೊಲೀಸ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button