Important
Trending

ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನ: ಆರೋಪಿಯ ಬಂಧನ

ಹೊನ್ನಾವರ: ತಾಲೂಕಿನ ಬಳ್ಕೂರ ಸಮೀಪ ಮಹಿಳೆಯನ್ನು ಮಾನಭಂಗಕ್ಕೆ ಯತ್ನಿಸಿದ ಘಟನೆಗೆ ಕುರಿತಂತೆ ಮಂಕಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.ಬಳ್ಕೂರಿನಿಂದ ಹೆಗ್ಗಾರ ಕಡೆಗೆ ಮಹಿಳೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಕಳಿಗೆದ್ದೆ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಸಮೀಪ ಅಪರಿಚಿತ ವ್ಯಕ್ತಿ ಹಿಂದಿನಿAದ ಬಂದು ಬಾಯಿಗೆ ಕೈಯಿಂದ ಒತ್ತಿ ಹಿಡಿದು, ನೆಲಕ್ಕೆ ಬೀಳಿಸಿದ ಸಂದರ್ಭದಲ್ಲಿ ರಸ್ತೆಯಲ್ಲಿ ಜನರು ಬರುವುದನ್ನು ಕಂಡು ಆರೋಪಿ ಪರಾರಿಯಾಗಿದ್ದ. ಈ ಕುರಿತು ಮಂಕಿ ಪೊಲೀಸ್ ಠಾಣಿಯಲ್ಲಿ ಮಹಿಳೆ ದೂರು ನೀಡಿದ್ದಳು.

ಮಹಿಳೆ ನೀಡಿದ ದೂರಿನ್ವಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ಕಾರ್ಯಚರಣೆಗೆ ಇಳಿದಿದ್ದ ಮಂಕಿ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು. ಕುಮಟಾ ರೈಲ್ವೆ ನಿಲ್ದಾಣ ಸಮೀಪ ಬಿಹಾರ ಮೂಲದ ಬೋಲಾ( ರಾಹುಲ್) ಎನ್ನುವವನನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಕಾರ್ಯಚರಣೆಯಲ್ಲಿ ಮಂಕಿ ಪಿ.ಎಸ್. ಐ ಭರತಕುಮಾರ ವಿ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ರಾಜು ಗೌಡ, ಸುಚೇತ ಆಚಾರಿ, ಎಚ್.ಸಿ .ನಾಗರಾಜ ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button