Important
Trending

ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಕಾಣೆ ! ಮನೆಯಲ್ಲಿಯೇ ಮಲಗಿದ್ದವಳು ರಾತ್ರಿ ವೇಳೆ ಯಾರಿಗೂ ಹೇಳದೇ ಹೋಗಿದ್ದೇಲ್ಲಿ?

ಅಂಕೋಲಾ: ತನ್ನ ಕುಟುಂಬದವರೊಂದಿಗೆ ವಾಸವಾಗಿದ್ದ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ರಾತ್ರಿಯ ವೇಳೆ ಮನೆಯಿಂದ ಕಾಣೆಯಾದ ಘಟನೆ ಘಟನೆ ತಾಲೂಕಿನ ಬೆಲೇಕೇರಿಯಲ್ಲಿ ನಡೆದಿದೆ. ತಾಲೂಕಿನ ಬೆಲೇಕೇರಿ ನಿವಾಸಿ ನಾಗರತ್ನಾ ರಾಜಾ ನಾಯ್ಕ (20) ಕಾಣೆಯಾದ ಯುವತಿಯಾಗಿದ್ದು, 17 – 11 – 2023 ರಂದು ಮಧ್ಯರಾತ್ರಿ 1 ಘಂಟೆಯಿಂದ ಬೆಳಗಿನ ಜಾವ 5.30 ಘಂಟೆಯ ನಡುವಿನ ಅವಧಿಯಲ್ಲಿ ಎಲ್ಲಿಗೋ ಹೋಗಿ ಕಾಣೆಯಾಗಿದ್ದಾಳೆ ಎಂದು, ಕಾಣೆಯಾದ ನಾಗರತ್ನಾ ಇವಳ ತಂದೆಯ, ಸಹೋದರಿ ಸುಮತಿ ವಿಠ್ಠಲ ನಾಯ್ಕ
ಎನ್ನುವವರು ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ.

ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಂದಾಜು 5 ಪೂಟ್ 2ಇಂಚು ಎತ್ತರ, ಗೋದಿ ಮೈ ಬಣ್ಣ, ಉದ್ದನೆಯ ಮುಖ, ಸಾಧಾರಣ ಮೈಕಟ್ಟು,ಕನ್ನಡ, ಹಿಂದಿ, ಕೊಂಕಣಿ ಭಾಷೆ ಅರಿತಿದ್ದು, ಬಿಳಿ ಬಣ್ಣದ ಗೆರೆಯುಳ್ಳ ನೀಲಿ ಬಣ್ಣದ ಟಾಪ್, ಕಪ್ಪು ಬಣ್ಣದ ಲಗ್ಗಿನ್ಸ ಪ್ಯಾಂಟ್, ಗುಲಾಬಿ ಬಣ್ಣದ ವೇಲ್, ಕುತ್ತಿಗೆಯಲ್ಲಿ ಬೆಳ್ಳಿ ನಮೂನೆಯ ಫ್ಯಾನ್ಸಿ ಚೈನ್, ಬಲ ಕೈಯಲ್ಲಿ ಕಪ್ಪು ಬಣ್ಣದ ದಾರ, ಕಿವಿಯಲ್ಲಿ ಪ್ಯಾನ್ಸಿ ರಿಂಗ್, ಬಿಳಿ ಬಣ್ಣದ ಚಪ್ಪಲಿ ಧರಿಸಿದ್ದು,ಈ ಮೇಲಿನ ಚಹರೆಯುಳ್ಳ ನಾಗರತ್ನ , ಎಲ್ಲಿಯಾದರೂ ಕಂಡು ಬಂದಲ್ಲಿ,ಅಥವಾ ಈ ಕುರಿತು ಏನಾದರೂ ಮಾಹಿತಿ ಇದ್ದಲ್ಲಿ ಅಂಕೋಲಾ ಪೊಲೀಸ್ ಠಾಣೆ (9480805250/9480805268) ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಅಂಕೋಲಾ ಪೋಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿನದಿಂದ ದಿನಕ್ಕೆ ಅಂಕೋಲಾದಲ್ಲಿ ಹದಿಹರೆಯದವರ ಮತ್ತು ಮಹಿಳೆಯರ ಕಾಣೆ ಪ್ರಕರಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಅಂಶವಾಗಿದೆ. ಕೆಲ ಪ್ರಕರಣಗಳು ಪೋಲೀಸ್ ಠಾಣೆಯಲ್ಲಿ ದಾಖಲಾದರೆ, ಮರ್ಯಾದೆ ಮತ್ತಿತರ ಕಾರಣಗಳಿಂದ ಮತ್ತೆ ಕೆಲ ಪ್ರಕರಣಗಳು ದಾಖಲಾಗದೇ ಇರುವುದು ಇಲ್ಲವೇ ವಿಳಂಬವಾಗಿ ದಾಖಲಾಗುತ್ತಿವೆ ಎನ್ನಲಾಗಿದ್ದು , ಬಹುತೇಕ ನಾಪತ್ತೆ (ಕಾಣೆ ) ಪ್ರಕರಣಗಳು ಪ್ರೀತಿ – ಪ್ರೇಮ – ಪ್ರಣಯ – ಆಕರ್ಷಣೆ ಸುತ್ತ ಗಿರಕಿ ಹೊಡೆಯುತ್ತಿವೆ ಎನ್ನಲಾಗಿದೆ. ಅದೇ ರೀತಿ ಈ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಕಾಣೆಯ ಹಿಂದೆ ಪ್ಯಾರ ಕಿ ಕಹಾನಿ ಇರಬಹುದೇ ಎಂದು ಕೆಲ ಸ್ಥಳೀಯರು ಮಾತಾಡಿಕೊಂಡಂತಿದ್ದು ಪೋಲೀಸ್ ತನಿಖೆಯಿಂದ ನಿಖರ ಕಾರಣ ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button