ಕೊರೋನಾ ಸೋಂಕಿತ ಗರ್ಭಿಣಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಭಟ್ಕಳ ತಾಲೂಕಾಸ್ಪತ್ರೆಯ ವೈದ್ಯೆ

ಭಟ್ಕಳ: ಇಲ್ಲಿನ ತಾಲೂಕಾಸ್ಪತ್ರೆ ವೈದ್ಯರು ಕೊರೊನಾ ಸೋಂಕಿತ ಗರ್ಭಿಣಿಯನ್ನು ಸುರಕ್ಷಿತ ಹೆರಿಗೆ ಮಾಡಿಸುವುದರ ಮೂಲಕ ಮಹಿಳೆ ಹಾಗೂ ಮಗು ಆರೋಗ್ಯವಾಗಿದ್ದಾರೆ.

ಶಿರಾಲಿ ಸರ್ಕಾರಿ ಆಸ್ಪತ್ರೆಗೆ ತೆರಳಿದ ಇಲ್ಲಿನ ವೆಂಕ್ಟಾಪುರದ ಗರ್ಭಿಣಿ ಮಹಿಳೆಯನ್ನು ಇಲ್ಲಿ ವೈದ್ಯರು ಕೊರೋನಾ ತಪಾಸಣೆ ಮಾಡಿದ್ದು ಸೋಂಕು ದೃಢಪಟ್ಟಿದ ಹಿನ್ನೆಲೆ ಶಿರಾಲಿ ಸರ್ಕಾರಿ ಆಸ್ಪತ್ರೆ ವೈದ್ಯರು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತೆರಳಲು ಸೂಚಿಸಿದ್ದು. ಗರ್ಭಿಣಿ ಮಹಿಳೆ ಹೆರಿಗೆ ನೋವು ಆರಂಭವಾಗುತ್ತಿದ್ದಂತೆಯೇ
ಡಾ ಶಂಮ್ಸ ನೂರ್ ,ಶುಶ್ರೂಷಕಿಯರಾದ ಸುಮಿತ್ರಾ ,ಲವೀನಾ ಹಾಗೂ ಸಹಾಯಕಿ ಭಾರತಿ ಅವರು ಸಹಾಯದಿಂದ ಮಹಿಳೆ ಸುರಕ್ಷಿತ ಹೆರಿಗೆ ಮಾಡಿಸಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ವೈದ್ಯರ ಈ ಕಾರ್ಯಕ್ಕೆ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ: ಸವಿತಾ ಕಾಮತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Exit mobile version