Important
Trending

ಬಸ್ ನಿಲ್ದಾಣದಲ್ಲಿದೆ ಅಪಾಯಕಾರಿಯಾದ ತೆರದ ಬೃಹತ್ ಇಂಗುಗುಂಡಿ: ಮೃತದೇಹ ಪತ್ತೆಯಾದ ಬೆನ್ನಲ್ಲೆ ಆಕ್ರೋಶ

ಕುಮಟಾ: ಇಂಗು ಗುಂಡಿಯಲ್ಲಿ ಮೃತ ದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಜನವರಿ 1 ರ ಮುಂಜಾನೆಯoದು ಕುಮಟಾದ ಹೊಸ ಬಸ್ ನಿಲ್ಧಾಣದಲ್ಲಿ ನಡೆದಿತ್ತು. ಲುಕ್ಕೇರಿಯ ಚಿದಾನಂದ ಪಟಗಾರ ಎನ್ನುವ 30 ವರ್ಷದ ಯುವಕನೇ ಶವವಾಗಿ ಪತ್ತೆಯಾದ್ದ. ದಿನ ನಿತ್ಯ ಸಾವಿರಾರು ಪ್ರಯಾಣಿಕರು, ಸಾರ್ವಜನಿಕರು ಸಂಚರಿಸುವ ಈ ಸ್ಥಳದಲ್ಲಿ ಅತ್ಯಂತ ತೆರೆದ, ಅಪಾಯಕಾರಿ ಹಾಗೂ ಅವೈಜ್ಞಾನಿಕವಾದ ಇಂಗು ಗುಂಡಿಯನ್ನು ನಿರ್ಮಿಸಿರುವುದು ಈ ಒಂದು ಘಟನೆಗೆ ಪ್ರಮುಖ ಕಾರಣವಾಗಿದೆ. ಇಂತಹ ಘಟನೆ ನಡೆದರೂ ಕೂಡ ಕೆ.ಎಸ್.ಆರ್.ಟಿಸಿ ಅಧಿಕಾರಿಗಳು, ಕುಮಟಾದ ದಿಪೋ ವ್ಯವಸ್ಥಾಪಕರು ಸೂಕ್ತ ಕ್ರಮ ಕೈಗೊಳ್ಳದೇ ಇರುವುದು ಅಧಿಕಾರಿಗಳ ನಿರ್ಲಕ್ಷ್ಯತನ ನವನ್ನು ಎದ್ದು, ತೋರಿಸುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವೃ ಆಕ್ರೋಶ ವ್ಯಕ್ತವಾಗಿದೆ.

ಬಸ್ ನಿಲ್ಧಾಣದ ಸಮೀಪವೇ ಬೃಹದ್ದಾಕಾರದ ಅವೈಜ್ಞಾನಿಕ ಇಂಗು ಗುಂಡಿಯೊoದಿದ್ದು, ಈ ಒಂದು ಗುಂಡಿಯು ಯಾವುದೇ ರೀತಿಯ ಸುರಕ್ಷತಾ ವ್ಯವಸ್ಥೆ ಇಲ್ಲದೇ ಅಪಯಕರಿಯೂ ಹಾಗೂ ನಿರ್ವಹಣೆ ಇಲ್ಲದೇ ಗಬ್ಬು ನಾರುತ್ತಿದೆ. ಬಸ್ ನಿಲ್ಧಾಣದಲ್ಲಿನ ಕ್ಯಾಂಟಿನ್ ಸೇರಿದಂತೆ ಇತರ ತ್ಯಾಜ್ಯ ನೀರು ಈ ಒಂದು ಗುಂಡಿಗೆ ಸೇರುತ್ತಿದ್ದು, ಬಸ್ ನಿಲ್ಧಾಣದ ಸಮೀಪವೇ ಇಂತಹ ಗುಂಡಿಯನ್ನು ನಿರ್ವಹಿಸಿರುವುದು ಬೇಜವಾಬ್ಧಾರಿ ತನದ ಸಂಗತಿಯಾಗಿದೆ. ಈ ಬಗ್ಗೆ ಕುಮಟಾದ ಡಿಪೋ ಮ್ಯಾನೇಜರ್ ಅವರನ್ನು ಪ್ರಶ್ನಿಸಿದಾಗ ಜವಾಬ್ಧಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಸಂಬoದ ಪಟ್ಟ ಮೇಲಾಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಪುರಸಭಾ ವ್ಯಾಪ್ತಿಯೇ ಆಗಿರುವ ಕಾರಣ ಈ ಬಗ್ಗೆ ಕುಮಟಾದ ಪುರಸಭಾ ಮುಖ್ಯಾಧಿಕಾರಿಗಳಾದ ವಿದ್ಯಾಧರ ಕಲಾದಗಿ ಅವರನ್ನು ವಿಚಾರಿಸಿದಾಗ ಕುಮಟಾ ಹೊಸ ಬಸ್ ನಿಲ್ಧಾಣದ ಇಂಗು ಗುಂಡಿಯ ನಿರ್ಮಾಣ, ನಿರ್ವಹಣೆ ಯಾವುದೂ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಎಲ್ಲವೂ ಕೂಡ ಕೆ.ಎಸ್.ಆರ್.ಟಿಸಿ ಅವರ ಜವಾಬ್ಧಾರಿಯೇ ಆಗಿರುತ್ತದೆ. ಆದರೂ ಕೂಡ ನಮ್ಮ ವ್ಯಾಪ್ತಿಯಲ್ಲಿ ಇಂತಹ ಒಂದು ಅವೈಜ್ಞಾನಿಕ ಗುಂಡಿ ಇರುವ ಕಾರಣ ಈ ಬಗ್ಗೆ ಮೇಲಾಧಿಕಾರಿಗಳೊಡನೆ ಮಾತನಾಡಿ, ತೆರೆದ ಇಂಗು ಗುಂಡಿಯನ್ನು ಮುಚ್ಚಿಸಿ ಸೂಕ್ತ ವ್ಯವಸ್ಥೆ ಮಾಡುವಂತೆ ನೋಟೀಸ್ ನೀಡುತ್ತೆವೆ ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷದಿಂದಾಗಿ ಗುಂಡಿಯಲ್ಲಿ ವ್ಯಕ್ತಿಯೋರ್ವರು ಬಿದ್ದು ಪ್ರಾಣ ಕಳೆದುಕೊಳ್ಳುವಂತಹ ಸ್ಥಿತಿ ಕುಮಟಾದಲ್ಲಿ ನಿರ್ಮಾಣವಾಗಿದೆ. ಈ ಬಗ್ಗೆ ಕೆ.ಎಸ್.ಆರ್.ಟಿಸಿ ಅಧಿಕಾರಿಗಳು ತೀರಾ ಬೇಜವಾಬ್ಧಾರಿ ತೋರಿರುವುದು ಕಂಡು ಬಂದಿದೆ. ಈ ಕುರಿತಾಗಿ ಜನಪ್ರತಿನಿಧಿಗಳು, ಮೇಲಾಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button