Focus News
Trending

ಹೊನ್ನಾವರ, ಅಂಕೋಲಾ, ಯಲ್ಲಾಪುರದ ಇಂದಿನ ಕರೊನಾ ಕೇಸ್ ಮಾಹಿತಿ

  • ಹೊನ್ನಾವರದಲ್ಲಿ 7, ಯಲ್ಲಾಪುರದಲ್ಲಿ 13 ಪಾಸಿಟಿವ್
  • ಅಂಕೋಲಾದಲ್ಲಿಂದು 13 ಕೊವಿಡ್ ಕೇಸ್

ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಇಂದು ವರದಿಯಾದ ಏಳೂ ಪ್ರಕರಣ ಗ್ರಾಮೀಣ ಭಾಗದಲ್ಲೇ ಪತ್ತೆಯಾಗಿದೆ. ಚಂದಾವರದಲ್ಲಿ- 3, ಕಡನ್ನೀರದಲ್ಲಿ- 3, ಕೆರೆಕೋಣದಲ್ಲಿ ಓರ್ವನದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಚಂದಾವರದ 40 ವರ್ಷದ ಪುರುಷ, 35 ವರ್ಷದ ಮಹಿಳೆ, 20 ವರ್ಷದ ಯುವಕ, ಕಡನ್ನೀರದ 34 ವರ್ಷದ ಪುರುಷ, 33 ವರ್ಷದ ಮಹಿಳೆ, 29 ವರ್ಷದ ಯುವತಿ, ಕೆರೆಕೋಣದ 47 ವರ್ಷದ ಪುರುಷನಿಗೆ ಪಾಸಿಟಿವ್ ಬಂದಿದೆ.

ಇಂದು ತಾಲೂಕಾ ಆಸ್ಪತ್ರೆಯಿಂದ ಮೂವರು ಡಿಸ್ಚಾರ್ಜ್ ಆಗಿದ್ದು, 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. 116 ಸೋಂಕಿತರಿಗೆ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಂಕೋಲಾದಲ್ಲಿ 13 ಪಾಸಿಟಿವ್

ಅಂಕೋಲಾ : ತಾಲೂಕಿನ ಕೇಣಿ, ಕಣಗಿಲ್, ಅವರ್ಸಾ, ಬೇಲೇಕೇರಿ, ಕಾಕರಮಠ, ಬೆಳಸೆ, ಲಕ್ಷ್ಮೇಶ್ವರ, ಹಟ್ಟಿಕೇರಿ ಸೇರಿದಂತೆ ನಾನಾ ಭಾಗಗಳಿಂದ ಗುರುವಾರ ಒಟ್ಟೂ 13 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿವೆ.

ಸೋಂಕು ಮುಕ್ತರಾದ 13 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನಲ್ಲಿ ರುವ 56 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 100 ಪ್ರಕರಣಗಳು ಸಕ್ರಿಯವಾಗಿದೆ. ಒಟ್ಟೂ 109 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಯಲ್ಲಾಪುರದಲ್ಲಿಂದು 13 ಮಂದಿಗೆ ಸೋಂಕು ದೃಢ

ಯಲ್ಲಾಪುರ: ತಾಲೂಕಿನಲ್ಲಿ ಇಂದು 13 ಜನರಿಗೆ ಕರೊನಾ ಧೃಢಪಟ್ಟಿದೆ. ಪಟ್ಟಣ ವ್ಯಾಪ್ತಿಯಲ್ಲಿ 6, ಗಾಣಗದ್ದೆಯಲ್ಲಿ 3 ಹಾಗೂ ತೆಂಗಿನಗೇರಿಯಲ್ಲಿ 4 ಜನರಿಗೆ ಸೋಂಕು ಪತ್ತೆಯಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ‌ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ

ಇದನ್ನೂ ಓದಿ; ಪ್ರಮುಖ‌‌ ಸುದ್ದಿಗಳು

Back to top button