Important
Trending

ವಿದ್ಯುತ್ ತಂತಿ ತಗುಲಿ ಅವಾಂತರ: ಡಂಪರ್ ಟ್ರಕ್ ಗೆ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಚಾಲಕ

ಕಾರವಾರ: ವಿದ್ಯುತ್ ತಂತಿ ತಗುಲಿದ ಪರಿಣಾಮ ಡಂಪರ್ ಟ್ರಕ್ಗೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದ ಪೋರ್ಟ್ ಕಾಲೋನಿಯಲ್ಲಿ ನಡೆದಿದೆ. ಇಲ್ಲಿನ ಕಟ್ಟಡ ಕಾಮಗಾರಿಯೊಂದಕ್ಕೆ ಎಂಸ್ಯಾAಡ್ ಹೊತ್ತು ತಂದಿದ್ದ ಟ್ರಕ್ ಅದನ್ನ ಖಾಲಿ ಮಾಡಲು ಡಂಪರ್ ಮೇಲೇರಿಸಿದ್ದ ವೇಳೆ ಅಲ್ಲೇ ಇದ್ದ ವಿದ್ಯುತ್ ತಂತಿ ತಗುಲಿದೆ. ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು ಟ್ರಕ್ನ ಟಯರ್ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಸ್ಥಳದಲ್ಲಿದ್ದವರು ಮಣ್ಣು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದು ಈ ವೇಳೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ವಿದ್ಯುತ್ ತಗುಲಿದ ವೇಳೆ ಚಾಲಕ ಟ್ರಕ್ನಿಂದ ಇಳಿದಿದ್ದ ಹಿನ್ನಲೆ ಪ್ರಾಣಾಪಾಯದಿಂದ ಪಾರಾಗಿದ್ದು ಭಾರೀ ದುರಂತವೊAದು ತಪ್ಪಿದಂತಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button