ಭಟ್ಕಳ: ರೈಲ್ವೆ ನಿಲ್ದಾಣಗಳಲ್ಲಿ ನಿರ್ಲಕ್ಷ್ಯದಿಂದ ಇಲ್ಲವೇ ವಿಧಿಯ ಆಟವೇ ಎಂಬoತೆ ಪ್ರಾಣಕ್ಕೆ ಎರವಾಗುವಂತಹ ಘಟನೆಗಳು ನಡೆಯುತ್ತಿರುತ್ತವೆ . ಇವು ಒಮ್ಮೆಲೇ ಜೀವ ಹಿಂಡುತ್ತವೆ. ಈ ವೇಳೆ ಆಪತ್ಭಾಂಧವರoತೆ ಕೆಲವರು ರಕ್ಷಣೆ ಮಾಡುತ್ತಾರೆ. ಅವರು ದೇವರ ರೂಪವೇ ಸರಿ ಎಂದು ಬದುಕುಳಿದವರು ಉದ್ಘರಿಸುವುದು ಸಾಮಾನ್ಯ. ಸದ್ಯ ಇಂತoಹದ್ದೇ ಘಟನೆಯೊಂದು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಚಲಿಸುತ್ತಿದ್ದ ರೈಲನ್ನು ಓಡಿ ಹೋಗಿ ಹತ್ತುತ್ತಿದ್ದ ಪ್ರಯಾಣಿಕ ಆಯಾ ತಪ್ಪಿ ಬಿಳುತ್ತಿರುವುದನ್ನು ಗಮನಿಸಿದ ರೈಲಿ ಸಿಬ್ಬಂದಿ ಯೋಗೇಶ ನಾಯ್ಕ ತಕ್ಷಣ ಆತನನ್ನು ಹಿಡಿದು ಚಲಿಸುವ ರೈಲಿನಡಿ ಸಿಲುಕುವುದನ್ನುತಪ್ಪಿಸಿ ರಕ್ಷಣೆ ಮಾಡಿದ್ದಾರೆ . ಗೋವಾ ಮಡ್ಗಾವ್ ನಿಂದ ಎರ್ನಾಕುಲಂ ಕಡೆಗೆ ಪ್ರಯಾಣಿಸುತ್ತಿದ್ದ ರೈಲೊಂದು ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಿಂತ ವೇಳೆ ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ಇಳಿದು ತಮಗೆ ಬೇಕಾದ ತಂಪು ಪಾಣಿಯಗಳನ್ನ ಖರೀದಿಸಿ ಪುನಃ ತೆರಳುವ ವೇಳೆಗಾಗಲೇ ರೈಲು ಚಲಿಸಲು ಪ್ರಾರಂಭವಾಗಿದೆ.
ಈ ವೇಳೆ ಕೆಲ ಪ್ರಯಾಣಿಕರು ಓಡುತ್ತ ರೈಲು ಹತ್ತಿದರೆ ಓರ್ವ ಪ್ರಯಾಣಿಕ ತನ್ನ ದೇಹದ ಬಾರದಿಂದ ಓಡಿ ರೈಲನ್ನು ಹತ್ತವ ವೇಳೆ ಕಾಲು ಜಾರಿ ರೈಲಿನಡಿ ಸಿಲುಕುತ್ತಿರುವ ವೇಳೆ ರೈಲ್ವೆ ಸಿಬ್ಬಂದಿ ಯೋಗೀಶ ನಾಯ್ಕ ಮಣ್ಕುಳಿ ತಕ್ಷಣ ತನ್ನ ಸಮಯ ಪ್ರಜ್ಞೆಯಿಂದಾಗಿ ಪ್ರಯಾಣಿಕನ ಸಹಾಯಕ್ಕೆ ಧಾವಿಸಿ ಆತನನ್ನು ಬಚಾವ್ ಮಾಡಿದ್ದಾರೆ. ದೇವರಂತೆ ಬಂದು ಪ್ರಾಣ ಉಳಿಸಿದ ರೈಲ್ವೆ ಸಿಬಂದಿ ಯೋಗೀಶ ನಾಯ್ಕರಿಗೆ ಪ್ರಾಣ ಉಳಿಸಿಕೊಂಡ ಪ್ರಯಾಣಿಕ ಧನ್ಯವಾದ ಸಲ್ಲಿಸಿ ಮುಂದಿನ ಪ್ರಯಾಣ ಬೆಳೆಸಿದ್ದಾರೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ