ಯಲ್ಲಾಪುರ: ಬೇಕರಿ ಎದುರು ನಿಲ್ಲಿಸಿಟ್ಟ ಬೈಕ್‌ನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕುರಿತು ನಾಗೇಂದ್ರ ಸುರೇಶ ಸಿದ್ಧಿ(28) ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ಕಳ್ಳತನವಾದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನವೆoಬರ್ 25ರಂದು ತಾಲೂಕಿನ ಕಲ್ಕಟ್ಟೆ ನಿವಾಸಿ ಶ್ರೀಪಾದ ಶಿವರಾಮ ಹೆಗಡೆ ಎಂಬುವರು ತಮ್ಮ ಹೀರೋ ಹೋಂಡಾ ಸ್ಪೆಂಡರ್ ಪ್ಲಸ್ ಬೈಕ್‌ನ್ನು ಪಟ್ಟಣದ ಹುಬ್ಬಳ್ಳಿ ಕಾರವಾರ ರಸ್ತೆಯ ಬೇಕರಿ ಎದುರಿನ ಕಾಳಮ್ಮನಗರದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿಟ್ಟಿದ್ದರು. ಈ ಬೈಕ್ ಕಳುವಾಗಿರುವ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಂಧಿತ ಆರೋಪಿ ತಾಲೂಕಿನ ಇಡಗುಂದಿ ಹಂಸನಗದ್ದೆ ನಿವಾಸಿ ನಾಗೇಂದ್ರ ಸುರೇಶ ಸಿದ್ಧಿ ಎಂದು ತಿಳಿದುಬಂದಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್, ಯಲ್ಲಾಪುರ