ಸಾಧಕ ವಿದ್ಯಾರ್ಥಿಗೆ ಶಿವಾನಂದ‌ ಹೆಗಡೆ ಕಡತೋಕಾ ಅವರಿಂದ ಸನ್ಮಾನ

ಹೊನ್ನಾವರ: ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ಪ್ರತಿಭಾವಂತ ವಿದ್ಯಾರ್ಥಿ ಜಯಂತ ರಾಜೇಂದ್ರ ಹಬ್ಬು ಅವರನ್ನು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೊಕಾ ಗೌರವಿಸಿ ಸನ್ಮಾನಿಸಿದರು.
ಹೊನ್ನಾವರ ತಾಲ್ಲೂಕು ಹಳದಿಪುರದ ರಾಜೇಂದ್ರ ಜಯಂತ ಹಬ್ಬು ಮತ್ತು ಶ್ರೀಮತಿ ನಾಗವೇಣಿ ಹಬ್ಬು ಇವರ ಪುತ್ರ ಜಯಂತ ರಾಜೇಂದ್ರ ಹಬ್ಬು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 99.20 (620/625) ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಆರನೇ ರ್ಯಾಂಕ್ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿ:

ಕರ್ಕಿಯ ದಯಾನಂದ ಭಾರತೀ ಗುರುಕುಲದ ( ಆಂಗ್ಲ ಮಾಧ್ಯಮ) ವಿದ್ಯಾರ್ಥಿಯಾದ ಜಯಂತ ರಾಜೇಂದ್ರ ಹಬ್ಬು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ.
ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯ ಮಟ್ಟದ ಸಾಧನೆ ಗೈದ ಜಯಂತ ಹಬ್ಬು ಅವರನ್ನು ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ಶಿವಾನಂದ ಹೆಗಡೆ ಕಡತೊಕಾ ಪತ್ನಿಯೊಂದಿಗೆ ಅವರ ಮನೆಗೆ ತೆರಳಿ ಅವರನ್ನು ಗೌರವಿಸಿ ಸನ್ಮಾನಿಸಿದರು. ಹಳದಿಪುರಕ್ಕೆ ರಾಜ್ಯ ಮಟ್ಟದಲ್ಲಿ ಹೆಸರು ತಂದ ವಿದ್ಯಾರ್ಥಿಯ ಸಾಧನೆಗೆ ಅಪಾರ ಹರ್ಷ ವ್ಯಕ್ತ ಪಡಿಸಿ ಮುಂದಿನ ವಿದ್ಯಾರ್ಥಿ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತೆ ಹಾರೈಸಿದರು. ವಿದ್ಯಾರ್ಥಿಯ ತಂದೆ ತಾಯಿಯರಾದ ರಾಜೇಂದ್ರ ಹಬ್ಬು ದಂಪತಿಗಳು ಮಗನ ಸಾಧನೆಗೆ ತುಂಬಾ ಸಂತಸಪಟ್ಟರಲ್ಲದೆ ಮುಂದಿನ ದಿನಗಳಲ್ಲಿ ಉನ್ನತ ವ್ಯಾಸಂಗದೊಂದಿಗೆ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ಸುನಿತಾ ಶಿವಾನಂದ ಹೆಗಡೆ.,ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸ್ಥಳೀಯ ಮುಖಂಡ ಸತೀಶ್ ಹಬ್ಬು, ಯುವ ಮುಖಂಡ ನವೀನ ನಾಯ್ಕ್ ಸಾಲಿಕೇರಿ, ಕುಮಾರಿ ರೇಷ್ಮಾ ಹಬ್ಬು, ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಹಬ್ಬು, ಸುಬ್ರಹ್ಮಣ್ಯ ಹಬ್ಬು, ಗಂಗಾಧರ ಹಬ್ಬು ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಹೊನ್ನಾವರ

Exit mobile version