Big News
Trending

ಅಂಕೋಲಾದಲ್ಲಿ 14 ಪಾಸಿಟಿವ್ ಕೇಸ್

  • ಹಬ್ಬಿದ ಸುಳ್ಳುವದಂತಿ
  • ಕರೊನಾ ವಾರಿಯರ್ ವೈದ್ಯರ ದೇಹಸ್ಥಿತಿ ಸ್ಥಿರ
[sliders_pack id=”3491″]

ಅಂಕೋಲಾ : ಜಿಲ್ಲಾಡಳಿತದ ನಿರ್ದೇಶನದಲ್ಲಿ ತಾಲೂಕಾ ವ್ಯಾಪ್ತಿಯ ಎಲ್ಲಾ ಸ್ಥರದ ಕರೊನಾ ವಾರಿಯರ್ಸ್‍ಗಳ ಅವಿರತ ಸೇವೆ ಹಾಗೂ ಪ್ರಜ್ಞಾವಂತ ನಾಗರಿಕರ ಸಹಕಾರದಲ್ಲಿ ಕರೊನಾ ಅಟ್ಟಹಾಸವನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಾ ಬರಲಾಗಿತ್ತು. ಮಂಗಳವಾರ ದಿನವೊಂದರಲ್ಲೇ 10ಕ್ಕೂ ಹೆಚ್ಚು ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದು ಪಟ್ಟಣದಾದ್ಯಂತ ನಾನಾ ರೀತಿಯ ಚರ್ಚೆ, ವದಂತಿ ಮತ್ತು ಆತಂಕಕ್ಕೆ ಕಾರಣವಾಯಿತು.

ಖಾಸಗಿ ಆಸ್ಪತ್ರೆಯಲ್ಲಿ ಓರ್ವ ಮೃತ : ಪಟ್ಟಣದ ಹೆಸರಾಂತ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಕೆಲ ದಿನಗಳ ಹಿಂದೆ ವಯೋ ಸಹಜ ಅಥವಾ ಇನ್ನಿತರ ಕಾರಣಗಳಿಂದ ದಾಖಲಾಗಿದ್ದ 78ರ ವೃದ್ಧರೋರ್ವರು, ಮಂಗಳವಾರ ಆಸ್ಪತ್ರೆಯಲ್ಲಿಯೇ ಅಸುನೀಗಿದ್ದು ಆ ವೇಳೆ ಕೋವಿಡ್ ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ಲಕ್ಷಣಗಳು ಪತ್ತೆಯಾಗಿತ್ತು. ಆತನ ಮೃತ ದೇಹವನ್ನು ಆಸ್ಪತ್ರೆಯಿಂದ ತಾಲೂಕಾಡಳಿತದ ನಿರ್ದೇಶನದಲ್ಲಿ ವಿವಿಧ ಇಲಾಖೆಯ ಕರೊನಾ ವಾರಿಯರ್ಸ್‍ಗಳ ಉಪಸ್ಥಿತಿಯಲ್ಲಿ, ಪಿ.ಪಿ ಕಿಟ್ ಧರಿಸಿ ಕುಟುಂಬಸ್ಥರೇ ನೇರವೇರಿಸಿದ್ದರು. ಅದೇ ಆಸ್ಪತ್ರೆಯಲ್ಲಿದ್ದ 38ಜನರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷಾ ವರದಿಯ ಪ್ರಕಾರ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಮತ್ತು ಆಸ್ಪತ್ರೆಯಲ್ಲಿದ್ದ ಇತರ ಕೆಲವರಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿತ್ತು.

ಹಬ್ಬಿದ ವದಂತಿ:

ನಾನಾ ಕಾರಣಗಳಿಂದ ಪೋಲೀಸ್ ವಾಹನ, ಆಂಬ್ಯುಲೆನ್ಸ್ ವಾಹನ ಮತ್ತಿತರ ವಾಹನಗಳ ಓಡಾಟ ಸಾಮಾನ್ಯವಾಗಿ ಹೆಚ್ಚಿದ್ದರಿಂದ, ಖಾಸಗಿ ಆಸ್ಪತ್ರೆಯ ಎದುರುಗಡೆ ರಸ್ತೆಯಲ್ಲಿ ಹಾದು ಹೋದ ಕೆಲ ಸಾರ್ವಜನಿಕರು ವಿಷಯವನ್ನು ಸರಿಯಾಗಿ ಅಥೈಸಿಕೊಳ್ಳದೇ, ತಮ್ಮ ತಿಳುವಳಿಕೆಗೆ ಅನುಗುಣವಾಗಿ ಚರ್ಚಿಸಿ, ಸುದ್ದಿ ಒಬ್ಬರಿಂದ ಒಬ್ಬರಿಗೆ ತಲುಪುವ ವೇಳೆ ಕೆಲ ವದಂತಿಗಳಿಗೂ ಎಡೆ ಮಾಡಿಕೊಟ್ಟಿತು ಎನ್ನಲಾಗಿದೆ. ಕಳೆದ 2,3 ದಿನಗಳ ಹಿಂದೆ ಇದೇ ಆಸ್ಪತ್ರೆಯ ಹಿರಿಯ ವೈದ್ಯರೊರ್ವರು ತಮ್ಮ ಅನಾರೋಗ್ಯದಿಂದ ಪಕ್ಕದ ಜಿಲ್ಲೆಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ಹೇಳಲಾಗಿದ್ದು ಅವರಲ್ಲಿಯೂ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗಿತ್ತು.

ಅಂಕೋಲಾದ ಆಸ್ಪತ್ರೆಯಲ್ಲಿ ಮೃತನಾದ ವೃದ್ಧನ ಸುದ್ದಿ, ಆಂಬ್ಯುಲೆನ್ಸ್ ಮತ್ತಿತರ ವಾಹನಗಳ ಒಡಾಟ ಕೆಲವರಿಗೆ ತಪ್ಪು ಗ್ರಹಿಕೆಗೆ ಕಾರಣವಾಗಿರಬಹುದಾಗಿದ್ದು, ಆಸ್ಪತ್ರೆಯ ವೈದ್ಯರ ದೇಹಾರೋಗ್ಯ ಸ್ಥಿತಿಯಲ್ಲಿಯೇ ಗಂಭೀರ ಏರುಪೇರಾಗಿದೆ ಎಂದು ಅರ್ಥೈಸಿ ವೈದ್ಯರ ಜೀವದ ಉಳಿವಿನ ಬಗ್ಗೆಯೇ ಸುಳ್ಳು ವದಂತಿಗಳು ಹರಿದಾಡಿರಬಹುದು ಎನ್ನಲಾಗಿದೆ. ಸುದೈವವಶಾತ ತಾಲೂಕಿನ ಅತ್ಯಂತ ಪ್ರಸಿದ್ಧಿ ಪಡೆದ ಮತ್ತು ತುರ್ತು ಸಂದರ್ಭಗಳಲ್ಲಿ ಅದೆಷ್ಟೋ ಪ್ರಾಣಗಳನ್ನು ರಕ್ಷಿಸಿದ ಕೀರ್ತಿಗೆ ಪಾತ್ರರಾಗಿರುವ, ನಾಡಿನ ಹೆಸರಾಂತ ವೈದ್ಯರಲ್ಲಿ ಓರ್ವರಾಗಿರುವ ಇವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಇದೇ ವೇಳೆ ವೈದ್ಯರ ಪ್ರಾಥಮಿಕ ಸಂಪರ್ಕದಿಂದ ಪತ್ನಿಯಲ್ಲಿಯೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ಇವರು ಸಹ ಉತ್ತಮ ವೈದ್ಯರೇ ಆಗಿದ್ದು, ಈ ದಂಪತಿಗಳು ಶೀಘ್ರ ಚೇತರಿಸಿಕೊಂಡು ಗುಣಮುಖರಾಗಿ ಮತ್ತೇ ಜನತೆಯ ಸೇವೆ ನೀಡುವಂತಾಗಲಿ ಎನ್ನುವುದು ಹಲವರ ಪ್ರಾರ್ಥನೆಯಾಗಿದೆ.

ಗಂಟಲುದ್ರವ ಪರೀಕ್ಷೆ :

ಮಂಗಳವಾರ 188, ಬುಧವಾರ 161 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು 14ಜನರಲ್ಲಿ ಪಾಸಿಟಿವ್ ಲಕ್ಷಣಗಳು ದೃಢಪಟ್ಟಿವೆ ಎನ್ನಲಾಗಿದೆ. ಮೃತನಾದ ವೇಳೆ ಪಾಸಿಟಿವ್ ಕಾಣಿಸಿಕೊಂಡಿದ್ದ ವೃದ್ಧನ ಸಂಪರ್ಕಕ್ಕೆ ಕುಟುಂಬ ಸದಸ್ಯನೊರ್ವ ಪುರಸಭೆ ಸಿಬ್ಬಂದಿ ಎಂದು ಹೇಳಲಾಗಿದ್ದು ಆತನಲ್ಲಿಯೂ ಪಾಸಿಟಿವ್ ಲಕ್ಷಣ ಕಾಣಿಸಿಕೊಂಡಿದ್ದರಿಂದ, ಸುರಕ್ಷತಾ ದೃಷ್ಟಿಯಿಂದ ಪುರಸಭೆ ಮುಖ್ಯಾಧಿಖಾರಿ ಸಹಿತ ಇತರೆ ಎಲ್ಲ ಸಿಬ್ಬಂದಿಗಳ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿದ್ದು ಅವರೆಲ್ಲೆರ ವರದಿ ನೆಗೆಟಿವ್ ಬಂದಿರುವುದು ಹಲವರ ಸಮಾಧಾನ ಮತ್ತು ನೆಮ್ಮದಿಗೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆ ಮತ್ತು ಪುರಸಭೆ ಕಾರ್ಯಾಲಯವನ್ನು ಸೆನಿಟೈಜೇಶನ್ ಮಾಡಲಾಗಿದೆ.

ಅನನ್ಯ ಸೇವೆ ನೀಡುತ್ತಿರುವ ಕೋವಿಡ್ ವಾರಿಯರ್ ಯೋಧರು:

ಜಿಲ್ಲಾಡಳಿತದ ನಿರ್ದೇಶನಲ್ಲಿ ಅಂಕೋಲಾ ತಾಲೂಕಾಡಳಿತ, ತಾಲೂಕಾ ಆರೋಗ್ಯಾಧಿಕಾರಿಗಳು, ಪೋಲೀಸ್, ಪುರಸಭೆ ತಾಲೂಕಾ ಪಂಚಾಯತ್, ಗ್ರಾಮಪಂಚಾಯತ, ಆಶಾ –ಅಂಗನವಾಡಿ-ಆರೋಗ್ಯ ಕಾರ್ಯಕರ್ತೆಯರು, ವಿವಿಧ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು, ಆರೋಗ್ಯ ಮತ್ತಿತರ ಇಲಾಖೆಗಳ ಅಧಿಕಾರಿ ಹಾಗೂ ಎಲ್ಲಾ ಸ್ಥರದ ಸಿಬ್ಬಂದಿಗಳು ಅನನ್ಯ ಸೇವೆ ನೀಡುತ್ತಿದ್ದು ಜನಪರ ಕಾಳಜಿ ತೋರಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಸಹ ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ಆರೋಗ್ಯ ಕಾಳಜಿಗೆ ಸೇವೆ ನೀಡಲು ಮುಂದಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಕರೊನಾ ನಿಯಂತ್ರಣದಲ್ಲಿ ಸರ್ವರ ಸಹಕಾರ ಅಗತ್ಯವಿದ್ದು ಸಾಮಾಜಿಕ ಕಳಕಳಿಯಿಂದ ಎಲ್ಲರೂ ಜವಬ್ದಾರಿ ನಿಭಾಯಿಸಬೇಕಿದೆ.ಮುಂಬರುವ ಹಬ್ಬ ಮತ್ತಿತರ ಜನದಟ್ಟನೆ ವೇಳೆ ಹಲವು ಮುಂಜಾಗ್ರತೆಗಳನ್ನು ಸ್ವಯಂಪ್ರೇರಿತವಾಗಿ ಕೈಗೊಳ್ಳುವ ಮೂಲಕ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ನಿಜವಾದ ಕರೊನಾ ವಾರಿಯರ್‍ಗಳ ಸೇವೆಗೆ ಸಹಕಾರ ನೀಡೊಣ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ
ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬoಧ ತೋರಿಸಲಾಗುವುದು
ಎರಡನೇಯ ಸಂಬoಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button