ಭಟ್ಕಳ: ಸರಕಾರಿ ಆಸ್ಪತ್ರೆಯ ಮೂಳೆತಜ್ಞ ಜನಾರ್ದನ ಮೋಗೇರ ಅವರು ಗಾಯಾಳುಗಳ ತಪಾಸಣೆ ಮತ್ತು ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿದ ಪ್ರಕರಣಕ್ಕೆ ಸಂಬoಧಿಸಿದoತೆ ಸಾರ್ವಜನಿಕರನ್ನೊಳಗೊಂಡ ಸಭೆ ನಡೆಯಿತು. ವೈದ್ಯ ಜನಾರ್ಧನ ಮೊಗೇರ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳಕ್ಕೆ ಬಂದು ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಈ ಹಿನ್ನೆಲೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನೀರಜ್ ಅವರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ವೈದ್ಯರ ಕುರಿತಾದ ಅಹವಾಲು ಆಲಿಸಿದರು.
ಸಮಾಜ ಸೇವಕ ಇರ್ಷಾದ್ ಮಾತನಾಡಿ ಓರ್ವ ರೋಗಿ ಅಥವಾ ಗಾಯಾಳುವಿಗೆ ವೈದ್ಯರಾದವರು ಅವರನ್ನು ಸ್ಪರ್ಶಿಸಿ ಅವರ ನೋವಿಗೆ ಸ್ಪಂದಿಸಿ ತಪಾಸಣೆ ಮತ್ತು ಚಿಕಿತ್ಸೆ ಮಾಡಬೇಕು. ಇದು ಕರ್ತವ್ಯ.. ಇನ್ನು ಚಿಕ್ಕ ಪುಟ್ಟ ಅಪಘಾತದಿಂದ ಗಾಯಾಳುಗಳಾಗಿರುವರನ್ನು ಪ್ರಥಮ ಚಿಕಿತ್ಸೆ ಸಹ ಮಾಡದೇ ನೇರವಾಗಿ ಬೇರೆ ಆಸ್ಪತ್ರೆಗೆ ಕಳುಹಿಸುತ್ತಾರೆ ಎಂದು ಆರೋಪಿಸಿದರು.
ಅಪಘಾತಕ್ಕೊಳಗಾದ ಮಹಿಳೆಯ ಮಗಳಾದ ರೋಹಿಣಿ ನಾಯ್ಕ ಅಪಘಾತದಲ್ಲಿ ನನ್ನ ತಾಯಿಗೆ ವೈದ್ಯ ಜನಾರ್ಧನ ಮೋಗೇರ ಅವರ ಬಳಿ ಚಿಕಿತ್ಸೆ ಮಾಡುವಂತೆ ಮನವಿ ಮಾಡಿದರು ಬಂದಿಲ್ಲ. ನೋವಿನ ತೀವ್ರತೆಯನ್ನು ಅರಿತು ನಾವು ಕಾರಿನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಸಾವಿರ ಗಟ್ಟಲೇ ಹಣವನ್ನು ವ್ಯಯಿಸಿ ತಪಾಸಣೆ ಮಾಡಿಸಿದಾದ ಚಿಕ್ಕ ಪುಟ್ಟ ಸಮಸ್ಯೆ ಆಗಿರುವುದು ಸಮಾಧಾನ ತಂದರು ಸಹ ಸರಕಾರಿ ಆಸ್ಪತ್ರೆಯ ವೈದ್ಯ ನಿರ್ಲಕ್ಷ್ಯದಿಂದ ಹಣ ವ್ಯಯಿಸಬೇಕಾಯಿತು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಮಗ ನೌಶಾದ್ ಮುಕ್ತಾರ್ ಅಹ್ಮದ ಮಾತನಾಡಿ ‘ಇಂತಹ ಕರ್ತವ್ಯಲೋಪ ಎಸಗುವ ವೈದ್ಯರು ನಮಗೆ ಬೇಕಾ? ಇವರು ರೋಗಿಗಳಿಗೆ ಚಿಕಿತ್ಸೆ ಕೊಡಲು ಆಗದೇ ಇದ್ದರೆ, ಸರಕಾರಿ ಕರ್ತವ್ಯಕ್ಕೆ ಏಕೆ ಬರಬೇಕು. ಇವರು ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಇದರಲ್ಲಿಯೇ ಖಾಯಂ ಇರಬಹುದಲ್ಲವೇ, ಇವರಿಗೆ ಸರಕಾರಿ ಕರ್ತವ್ಯ ಏಕೆ ಬೇಕು ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಮೂಳೆ ತಜ್ಞ ಜನಾರ್ದನ ಮೋಗೆರ ಅವರಿಗೆ ಅವರ ಅಭಿಪ್ರಾಯ ಹೇಳಲು ಅವಕಾಶ ನೀಡುತ್ತಿದಂತೆ ಸಾರ್ವಜನಿಕರು ನಿರಾಕರಿಸಿ ಗದ್ದಲ ಎಬ್ಬಿಸಿದರು. ಈ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನೀರಜ್ ‘ ಈಗಾಗಲೇ ಸಾಕಷ್ಟು ಸಾರ್ವಜನಿಕರಿಂದ ದೂರುಗಳನ್ನು ಆಲಿಸಿ ಮಾಹಿತಿ ಪಡೆದುಕೊಂಡಿದ್ದೇವೆ. ಆಸ್ಪತ್ರೆಯಲ್ಲಿ ಇಷ್ಟು ದಿವಸ ಮಾಡಿದ ಕೆಲಸ ರೋಗಿಗಳ ತಪಾಸಣೆ, ಶಸ್ತ್ರಚಿಕಿತ್ಸೆ ಸೇರಿದಂತೆ ಹಾಗೂ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಕುರಿತಂತೆ ಸಿ.ಸಿ.ಟಿವಿ ದ್ರಶ್ಯಗಳನ್ನು ವೈದ್ಯ ಪ್ರಕರಣಕ್ಕೆ ಸಂಬoಧಿಸಿದoತೆ ಸಂಗ್ರಹಿಸಿದ್ದೇವೆ.
ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಅವರಿಂದಲೂ ಸಹ ವೈದ್ಯ ಜನಾರ್ದನ ಮೋಗೆರ ಅವರು ಕೆಲಸದ ರೀತಿ ನೀತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಇವೆಲ್ಲವನ್ನು ರಾಜ್ಯದ ಆರೋಗ್ಯ ಇಲಾಖೆಯ ಆಯುಕ್ತರಿಗೆ ಮತ್ತು ಸರಕಾರದ ಆರೋಗ್ಯ ಸಚಿವರಿಗೆ ಕಳುಹಿಸಿಕೊಡಲಿದ್ದೇವೆ. ಸದ್ಯಕ್ಕೆ ವೈದ್ಯ ಜನಾರ್ದನ ಮೋಗೇರ ಅವರಿಗೆ 15 ದಿವಸದ ರಜೆ ನೀಡಿದ್ದೇವೆ ಎಂದರು, ಈ ಸಂದರ್ಭದಲ್ಲಿ ಟಿ.ಎಚ್.ಓ. ಡಾ. ಸವಿತಾ ಕಾಮತ, ಆಸ್ಪತ್ರೆಯ ವೈದ್ಯ ಡಾ. ಸತೀಶ ಬಿ. ಇದ್ದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ