ಶಿರಸಿ: ವಿದ್ಯುತ್ ಅವಘಡ ಸಂಭವಿಸಿ ಕಾರ್ಖಾನೆ ಯೊಂದರಲ್ಲಿ ಭಾರೀ ಪ್ರಮಾಣದ ಬೆಂಕಿ ಅವಘಡ ಸಂಭವಿಸಿದ ಘಟನೆ ಶಿರಸಿ ತಾಲೂಕಿನ ಕೊಳಗಿಬೀಸ್ ನಲ್ಲಿ ನಡೆದಿತ್ತು., ಈ ದುರ್ಘಟನೆಯಲ್ಲಿ ಸುಮಾರು 3ಕೋಟಿಗೂ ಅಧಿಕ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕಾರ್ಖಾನೆಯಲ್ಲಿ ವಾಹನಗಳ ಬುಷ್, ಡ್ಯಾಶ್ ಬೋರ್ಡ್ ತಯಾರು ಮಾಡಲಾಗುತ್ತಿತ್ತು .
ಗುರುವಾರ ಮಧ್ಯಾಹ್ನ ದ ವೇಳೆಗೆ ಕಟ್ಟದ ಒಳಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸುಮಾರು 20ಕ್ಕೂ ಅಧಿಕ ಜನರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಟ್ಟಡದ ಮುಂಭಾಗದಲ್ಲಿದ್ದ ಅಡಕೆ ತೋಟಕ್ಕೂ ಬೆಂಕಿ ತಗುಲಿ ಅಲ್ಪ ಪ್ರಮಾಣದ ಹಾನಿಯಾಗಿದೆ.
ಸ್ಥಳಕ್ಕೆ ಪೊಲೀಸ್ ಇಲಾಖೆ,ವಿದ್ಯುತ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಶ್ರೀಧರ ಮುಂದಲಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಶಿರಸಿಯಂತಹ ಪ್ರದೇಶದಲ್ಲಿ ಕೇವಲ ಒಂದೇ ಒಂದು ಅಗ್ನಿಶಾಮಕ ವಾಹನ ಇರುವುದರಿಂದ ತೊಂದರೆ ಯಾಗುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಅವಘಡಗಳು ಸಂಭವಿಸಿದಾಗ ಬೆಂಕಿ ನಂದಿಸಲು ಪರದಾಡಬೇಕಾಗುತ್ತದೆ. ಆದ್ದರಿಂದ ಸರ್ಕಾರ ತಕ್ಷಣ ಶಿರಸಿ ತಾಲೂಕಿನ ಇನ್ನೊಂದು ಅಗ್ನಿ ಶಾಮಕ ವಾಹನವನ್ನು ನೀಡಬೇಕು ಎಂದು ಸ್ಥಳೀಯರು ಸರ್ಕಾರಕ್ಕೆ ಆಗ್ರಹಿಸಿದರು.
ವಿಸ್ಮಯ ನ್ಯೂಸ್, ಶಿರಸಿ