Important
Trending

ಇದ್ದಕ್ಕಿದ್ದಂತೆ ಮಾಯವಾದ ಬೈಕ್: ಸಿಸಿಟಿವಿಯಲ್ಲಿ ಚೆಕ್ ಮಾಡಿದಾಗ ಶಾಕ್! ಇದು ಹೇಗೆ ಸಾಧ್ಯ?

ಮುಂಡಗೋಡ: ನಿಲ್ಲಿಸಿಟ್ಟಿದ್ದ ಬೈಕ್ ಇದ್ದಕ್ಕಿದ್ದಂತೆ ಮಾಯವಾಗಿ ಅಚ್ಚರಿ ಮೂಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ. 1ರ ಬಳಿ ನಡೆದಿದೆ. ತಾಲೂಕಿನ ಇಂದೂರ ಗ್ರಾಮದ ಲಕ್ಷಣ ಎಂಬುವವರು ತಮ್ಮ ಬೈಕನ್ನ ಕ್ಯಾಂಪ್ ಪಕ್ಕದ ಗ್ಯಾರೇಜ್‌ಗೆ ರಿಪೇರಿಗಾಗಿ ತಂದು ನಿಲ್ಲಿಸಿಟ್ಟಿದ್ದರು. ಆದರೆ ಮಾರನೇ ದಿನ ಹೋಗಿ ನೋಡುವಷ್ಟರಲ್ಲಿ ನಿಲ್ಲಿಸಿಟ್ಟ ಜಾಗದಿಂದ ಮಾಯವಾಗಿತ್ತು.

ಇದ್ದಕ್ಕಿದ್ದಂತೆ ಮಾಯವಾದ ಬೈಕ್: ಸಿಸಿಟಿವಿಯಲ್ಲಿ ಚೆಕ್ ಮಾಡಿದಾಗ ಇದ್ದಕ್ಕಿದ್ದಂತೆ ಮಾಯವಾದ ಬೈಕ್: ಇದು ಹೇಗೆ ಸಾಧ್ಯ?

ಬೈಕ್ ಕಳ್ಳತನವಾಗಿರಬಹುದು ಎಂದು ಗ್ಯಾರೇಜ್ ಸಮೀಪದ ಹೋಟೆಲ್‌ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಚೆಕ್ ಮಾಡಿದಾಗ ಡಿಸೆಂಬರ್ 6ರಂದು ಮಧ್ಯರಾತ್ರಿ ಬೈಕ್ ಇದ್ದಕ್ಕಿದ್ದಂತೆ ಮಾಯವಾಗಿರುವುದು ರೆಕಾರ್ಡ್ ಆಗಿದ್ದು, ಇದನ್ನ ಕಂಡು ಎಲ್ಲರೂ ಒಂದು ವಿಚಲಿತರಾಗಿದ್ದಾರೆ. ಬೈಕ್ ಮಾಲೀಕ ಮುಂಡಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸಿಸಿಟಿವಿಯಲ್ಲಿ ತಾಂತ್ರಿಕ ದೋಷದಿಂದ ಹೀಗಾಗಿದೆಯೇ? ಅಥವಾ ಇದಕ್ಕೆ ಇನ್ನೇನು ಕಾರಣ ಎಂದು ಪೊಲೀಸ್ ತನಿಖೆಯ ಬಳಿಕ ಪ್ರಕರಣದ ನಿಜಾಂಶ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಕಾರವಾರ

Back to top button