Focus News
Trending

ರಾಜ್ಯ ಹಾಗೂ ಹೊರ ರಾಜ್ಯದ 2500 ಕ್ಕೂ ಹೆಚ್ಚು ದಂತ ವೈದ್ಯರ ಸಮಾವೇಶದಲ್ಲಿ ಪ್ರಶಸ್ತಿ ಪ್ರಧಾನ.

ಅಂಕೋಲಾ : ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ದಂತ ವೈದ್ಯರ ಸಮಾವೇಶ ದಲ್ಲಿ ಅಂಕೋಲೆಯ ಖ್ಯಾತ ದಂತ ವೈದ್ಯ ಡಾ. ಕೃಷ್ಣ ಪ್ರಭು ರವರಿಗೆ, ಅವರ ಅತ್ಯುತ್ತಮ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಭಾರತೀಯ ದಂತ ವೈದ್ಯಕೀಯ ಸಂಸ್ಥೆ ಕೊಡಮಾಡುವ
” ಅತ್ಯುತ್ತಮ ದಂತ ವೈದ್ಯ ಸೆಕ್ರೆಟರಿ ಪ್ರಶಸ್ತಿ “ಯನ್ನು ಪ್ರದಾನ ಮಾಡಲಾಯಿತು. ಕರ್ನಾಟಕ ಮತ್ತಿತರ ರಾಜ್ಯಗಳ 2500 ಕ್ಕಿಂತಲೂ ಹೆಚ್ಚು ದಂತ ವೈದ್ಯರುಗಳು ಉಪಸಿತರಿದ್ದ ಈ ಭವ್ಯ ಸಮಾರಂಭದ ವೇದಿಕೆಯಲ್ಲಿ ಪ್ರಭು ಅವರನ್ನು ಪುರಸ್ಕರಿಸಿ ಗೌರವಿಸಲಾಯಿತು.

ನಗುಮುಖದ ಸೇವೆಯ ಡಾ ಪ್ರಭು ಅವರು ಕೋಲ್ಡ್ ಲೇಸರ್ ಟ್ರೀಟ್ಮೆಂಟ್ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ತಮ್ಮ ದಂತ ಚಿಕಿತ್ಸಾಲಯದಲ್ಲಿ ನೀಡುತ್ತಿರುವುದಲ್ಲದೆ,ದಂತ ಆರೋಗ್ಯ ರಕ್ಷಣೆ ಕುರಿತು ತಾಲೂಕು ಜಿಲ್ಲೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನೂರಾರು ವಿಚಾರ ಸಂಕೀರ್ಣ ಹಾಗೂ ಶಿಬಿರಗಳಲ್ಲಿ ಪಾಲ್ಗೊಂಡು ಜನಜಾಗೃತಿ ಮೂಡಿಸುತ್ತಿದ್ದಾರೆ. ದಂತ ವೈದ್ಯರಿಗೆ ದೊರೆತ ಈ ಪುರಸ್ಕಾರಕ್ಕೆ , ಪ್ರಭು ಕುಟುಂಬದ ಆಪ್ತರು ,ಹಿತೈಷಿಗಳು,ಗಣ್ಯರು ಸಂತಸ ವ್ಯಕ್ತಪಡಿಸಿದ್ದಾರೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button