Follow Us On

Google News
Important
Trending

ಕಡಲನಗರಿ ಕಾರವಾರದಲ್ಲಿ ಹೊಸ ವರ್ಷದ ಸಂಭ್ರಮ: ಮೋಡಿ ಮಾಡಿದ ನಚಿಕೇತ್, ಮಿಸ್ಮಿ ಗಾಯನ: ಹರಿದುಬಂದ ಜನಸಾಗರ

ಕಾರವಾರ: ಎಲ್ಲೆಡೆ ಹೊಸ ವರ್ಷದ ಸಂಭ್ರಮ ಮುಗಿಲುಮುಟ್ಟಿತ್ತು. ಕಡಲನಗರಿ ಕಾರವಾರದಲ್ಲಿಯೂ ಹೊಸ ವರ್ಷವನ್ನು ಗಾಯಕರಾದ ನಚಿಕೇತ್ ಲೀಲೆ ಹಾಗೂ ಮಿಸ್ಮಿ ಬೋಸ್ ಅವರ ಸಂಗೀತ ಟ್ಯಾಗೋರ ಕಡಲತೀರದಲ್ಲಿ ನೆರೆದಿದ್ದ ಸಾವಿರಾರು ಮಂದಿಯನ್ನು ತೇಲಾಡುವಂತೆ ಮಾಡಿದರೇ ಇತ್ತ ಯುವಕರು ಬಾನೆತ್ತರಕ್ಕೆ ಸಿಡಿಮದ್ದುಗಳನ್ನು ಹಾರಿ ಕುಣಿದು ಕುಪ್ಪಳಿಸುವ ಮೂಲಕ ಹೊಸ ವರ್ಷವನ್ನು ಭರಮಾಡಿಕೊಂಡರು.

ನಗರದ ರವೀಂದ್ರನಾಥ ಟ್ಯಾಗೋರ ಕಡಲತೀರದಲ್ಲಿ ಜಿಲ್ಲಾ ಪ್ರವಾಸೋಧ್ಯಮ ಅಭಿವೃದ್ಧಿ ಸಮಿತಿಯಿಂದ ಹೊಸ ವರ್ಷದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಸಿಂಗರ್ ನಚಿಕೇತ್ ಲೀಲೆ ಹಾಗೂ ಮಿಸ್ಮಿ ಬೋಸ್ ಒಂದು ಗಂಟೆವರೆಗೂ ನೆರೆದಿದ್ದ ಸಾವಿರಾರು ಮಂದಿಯನ್ನು ತಮ್ಮ ಗಾನಸುಧೆಯಿಂದ ಕುಣಿದು ಕುಪ್ಪಳಿಸುವಂತೆ ಮಾಡಿದರು. ಅಲ್ಲದೆ ಸ್ಥಳೀಯ ಕಲಾವಿದರಿಂದಲೂ ನೃತ್ಯ ಹಾಗೂ ಗಾಯನ ನಡೆಯಿತು.

ಇನ್ನು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಶಾಸಕ ಸತೀಶ್ ಸೈಲ್, ನ್ಯಾಯಾಸದೀಶರು ಉಪಸ್ಥಿತರಿದ್ದರು. ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಿಂಗರ್ ನಚಿಕೇತ್ ಹಾಡಿಗೆ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವರು ಸ್ಟೇಪ್ ಹಾಕಿ ಸಂಭ್ರಮಿಸಿದರು. ಸ್ಟೇಜ್ ಎದುರು ಯುವಕರು ಸೇರಿದಂತೆ ಶಾಸಕರೂ ಕೂಡ ಕುಣಿದು ಹೊಸ ವರತಷವನ್ನು ಸಂಭ್ರಮದಿAದ ಬರಮಾಡಿಕೊಂಡರು.

ಸoಜೆಯಾಗುತ್ತಿದ್ದoತೆ ಇಲ್ಲಿನ ರವೀಂದ್ರನಾಥ ಟ್ಯಾಗೋರ್ ಕಡಲತೀರ ಕಳೆಗಟ್ಟಿತ್ತು. ಸ್ಥಳೀಯರಲ್ಲದೇ ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ತೀರದಲ್ಲಿ ಜಮಾಯಿಸಿದ್ದರು. ವರ್ಷದ ಕೊನೆಯ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದರು. ಕೆಂಪು ಸೂರ್ಯನ ಸೊಬಗನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದರು. ಜತೆಗೆ ಕೆಲವರು ಒಟ್ಟಾಗಿ ನಿಂತು ಸೆಲ್ಫಿ ಕ್ಲಿಕಿಸಿದರು.

ಇನ್ನು ರಾಜ್ಯದ ನಾನಾ ಭಾಗಗಳಿಂದ ಆಗಮಿಸಿ ಗೋವಾ ಪ್ರವಾಸ ಕೈಗೊಂಡಿದ್ದ ಪ್ರವಾಸಿಗರು ಅಲ್ಲಿ ಹೋಟೆಲ್ ಹಾಗೂ ರೆಸಾರ್ಟ್ಗಳ ಕೊಠಡಿಗಳು ಭರ್ತಿಯಾಗಿರುವುದರಿಂದ ವಸತಿ ವ್ಯವಸ್ಥೆ ಸಿಗದೇ ಜಿಲ್ಲೆಯತ್ತ ಮುಖ ಮಾಡಿದ್ದರು. ಇದರಿಂದ ನಗರದ ಹೋಟೆಲ್‌ಗಳಿಗೂ ಬೇಡಿಕೆ ಹೆಚ್ಚಿದ್ದು, ಬಹುತೇಕ ಹೋಟೆಲ್‌ಗಳ ಕೊಠಡಿಗಳು ಭರ್ತಿಯಾಗಿದ್ದವು. ಹೊಸ ವರ್ಷಾಚರಣೆಗೆಂದೇ ಪ್ರವಾಸಿಗರ ಸ್ನೇಹಿತರ ಸಹಕಾರದಲ್ಲಿ ತಿಂಗಳ ಮುಂಚೆಯೇ ಮುಂಗಡವಾಗಿ ಕೊಠಡಿಗಳನ್ನು ಕಾದಿರಿಸಿದ್ದು, ಕೊನೆ ಹಂತದಲ್ಲಿ ಪ್ರವಾಸ ಕೈಗೊಂಡವರು ವಸತಿಗಾಗಿ ಪರದಾಡುತ್ತಿರುವುದು ಕಂಡು ಬಂತು.

ಇನ್ನು ಕೆಲವು ಕಡೆಗಳಲ್ಲಿ ಕೆಲ ಯುವತಿಯರ ಗುಂಪು ತಮಗೆ ಸೂಕ್ತವೆನಿಸಿದ ಸ್ಥಳಗಳಲ್ಲಿ ಸರಳವಾಗಿ ಪಾರ್ಟಿಗಳನ್ನು ನಡೆಸಿದರೆ, ಇನ್ನು ಕೆಲವರು ತಮ್ಮ ಮನೆಯ ಓಣಿಗಳಲ್ಲಿ ಡಿ.ಜೆ ಹಾಕಿ ಕುಣಿದು ಕುಪ್ಪಳಿಸಿದರು. ಸ್ನೇಹಿತರು, ಕುಟುಂಬದವರ ಜತೆ ಸೆಲ್ಫಿ ತೆಗೆದುಕೊಳ್ಳುವುದರ ಜತೆ, ಇಷ್ಟದ ತಿಂಡಿಗಳನ್ನು ತಿಂದು ಸಂಭ್ರಮಿಸಿದರು.

ವಿಸ್ಮಯ ನ್ಯೂಸ್, ಕಾರವಾರ

Back to top button