
ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿರುವ ಮಾಸೂರಿನ ಬೊಬ್ರುಲಿಂಗೇಶ್ವರ ದೇವರ ಕಳಸ ಉತ್ಸವ ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ನಡೆಯಿತು. ಇದು ಇಲ್ಲಿನ ಅತ್ಯಂತ ದೊಡ್ಡ ಮತ್ತು ಸಂಭ್ರಮದ ಹಬ್ಬ. ಮೊದಲನೆಯ ದಿನ ಮಾಸೂರಿನ ಕಲಶ ದೇವಸ್ಥಾನ ಮತ್ತು ಕೋಮಾರ ಗೋಳಿ ಜೈನ ಜಟಕ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು, ಹೆಣ್ಣು ಮಕ್ಕಳ ಆರತಿ, ಗಂಡು ಮಕ್ಕಳ ಹೊಡೆ ಸೇವೆ ಅತ್ಯಂತ ಭಕ್ತಿಪೂರ್ವಕವಾಗಿ ನಡೆದವು.
ಮರುದಿನ ಕಳಸಗಳು ಎದ್ದು ಅಘನಾಶಿನಿ ನದಿಯ ಮೂಲಕ ದೋಣಿಯ ಮೇಲೆ ಸಂಚಾರ ಮಾಡಿ ಬಬ್ರುದೇವರ ಮಂದಿರಕ್ಕೆ ಹೋದವು. ಹೋಗುವದಕ್ಕಿಂತ ಪೂರ್ವದಲ್ಲಿ ದುಷ್ಟ ಶಕ್ತಿಯನ್ನು ಮೆಟ್ಟುತ್ತಾ, ಶಿಷ್ಟ ಶಕ್ತಿಯನ್ನು ರಕ್ಷಿಸುತ್ತಾ, ಭಕ್ತರ ಸಮಸ್ಯೆಗಳಿಗೆ ವಿಚಾರದ ಮೂಲಕ ಪರಿಹಾರ ನೀಡುತ್ತಾ ಸಾಗಿದವು. ಶ್ರೀ ಬಬ್ರುಲಿಂಗೇಶ್ವರನ ಸನ್ನಿಧಿಯಲ್ಲಿ ಅತ್ಯಧಿಕ ತುಲಾಭಾರ ಸೇವೆ, ಸಹಸ್ರರಾರು ಬಾಳೆಕೊನೆಗಳು, ಹಣ್ಣುಕಾಯಿ ಅರ್ಪಣೆಯಾಗಿ ಸಾವಿರಾರು ಭಕ್ತರು ಕ್ರತಾರ್ಥರಾದರು.
ವಿಸ್ಮಯ ನ್ಯೂಸ್, ಕುಮಟಾ