Important

ಜಿಂಕೆ ಬೇಟೆ: ಜಿಂಕೆ ಚರ್ಮ, ಮಾಂಸ‌ ವಶಕ್ಕೆ: ಮೂವರ ಬಂಧನ

  • ಅರಣ್ಯ ವ್ಯಾಪ್ತಿಯಲ್ಲಿ ಜಿಂಕೆ‌ ಬೇಟೆ
  • ಜಿಂಕೆ ಮಾಂಸದಿಂದ ಪದಾರ್ಥ ತಯಾರಿಸಿದ್ದರು
  • ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು

ಜೋಯ್ಡಾ: ಕಾಡು ಪ್ರಾಣಿ ಬೇಟೆಯಾಡಿದ ಆರೋಪದಡಿ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಜೋಯ್ಡಾದಲ್ಲಿ ಮೂವರನ್ನು ಬಂಧಿಸಿದ್ದಾರೆ. ಈ ಆರೋಪಿಗಳು ಕುಮ್ರಾಲ್ ಅರಣ್ಯ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಜಿಂಕೆಯನ್ನು ಬೇಟೆಯಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಿಂಕೆಯ ಮಾಂಸದಿಂದ ತಯಾರಿಸಿದ ಪದಾರ್ಥ, ಜಿಂಕೆಯ ಚರ್ಮ ಹಾಗೂ ಬೇಟೆಯಾಡಲು ಬಳಸಿದ ನಾಡ ಬಂದೂಕನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

ತಾಲೂಕಿನ ಜಗಲ್ ಬೇಟ್ ಅರಣ್ಯವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಗಲ್ ಬೇಟ್ ನ ಕುಮ್ರಾಲ್ ಗ್ರಾಮದ ಮನೋಹರ್ ರಾಮಾ ಕದಮ್, ದತ್ತಾ ರಾಮಾ‌ ಕದಮ್, ಈಶ್ವರ್ ಚಂದ್ರು ಹಣಬರ್ ಬಂಧಿತ ಆರೋಪಿಗಳಾಗಿದ್ದಾರೆ.

ವಿಸ್ಮಯ ನ್ಯೂಸ್ ಜೋಯ್ಡಾ

Back to top button