Important
Trending

ಐದುನೂರು ವರ್ಷಗಳ ದೀರ್ಘ ಹೋರಾಟ: ಇವತ್ತು ತಾರ್ಕಿಕ ಅಂತ್ಯ ಕಂಡಿದೆ: ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ

ಹೊನ್ನಾವರ: ರಾಮನಿಂದ ಪ್ರಾರಂಭವಾಗಿದೆ – ಇಷ್ಟು ಬೇಗ ಇದಕ್ಕೆ ವಿರಾಮ ಸಿಗುವುದಿಲ್ಲ. ಅಂತಿಮ ಯುದ್ದ ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ ಎಂದು ಸಂಸದ ಅನಂತಕುಮರ ಹೆಗಡೆ ಹೇಳಿದರು. ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯಲ್ಲಿ ಸೋಮವಾಅರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಲೋಕಾರ್ಪಣೆಯ ಅಂಗವಾಗಿ ಹಮ್ಮಿಕೊಳ್ಳಲಾದ ವಿಶೇಷ ಪೂಜೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇವಲ ಹದಿನೈದು-ಇಪ್ಪತ್ತು ತಲೆಮಾರುಗಳ ಹಿಂದೆ ಭವ್ಯರಾಮ ಮಂದಿರ ಧೂಳಿಪಟ ಆಗಿತ್ತು. ಇವತ್ತು ಪುನಃ ಮತ್ತೆ ತಲೆಯೆತ್ತಿ ನಿಂತಿದೆ. ಇದು ಮೃತ್ಯುಂಜಯ ಸಮಾಜದ ಸಾಕ್ಷಿ ಎಂದರು. ಇನ್ನು ಮುಂದಿನ ದಿನಗಳಲ್ಲಿ ಮತ್ತೊಂದಿಷ್ಟು ಸಂಕ್ರಾAತಿ ನಡೆಯಲಿಕ್ಕಿದೆ. ಆ ಸಂಕ್ರಾAತಿಗೆ ಇವತ್ತಿನ ದಿನ ನಾಂದಿಯಾಗಲಿ ಎಂಬ ಶುಭ ಹಾರೈಸುತ್ತೇನೆ ಎಂದರು. ಐದು ನೂರು ವರ್ಷಗಳ ದೀರ್ಘ ಹೋರಾಟ. ಮೂರುವರೆ ಲಕ್ಷಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡ ಹೋರಾಟ. ಇವತ್ತು ತಾರ್ಕಿಕ ಅಂತ್ಯ ಕಂಡಿದೆ.

ಜೈ ಶ್ರೀರಾಮ ನಮ್ಮ ಪಾರ್ಲಿಮೆಂಟಿನಲ್ಲಿ ಮೊಳಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಯುಕೆ ಪಾರ್ಲಿಮೆಂಟಿನಲ್ಲಿ ಜೈಶ್ರೀರಾಮ ಎಂದು ಹೆಳುತ್ತಾರೆ. ನೆದರಲ್ಯಾಂಡಿನಲ್ಲಿ, ಹಂಗೇರಿಯಲ್ಲಿ ಆಸ್ಟೆçÃಲಿಯಾದಲ್ಲಿ, ಯುಎಸ್ ದಲ್ಲಿ ಹಂಡ್ರೆಡ್ ಪರ್ಸಂಟ್ ಹಿಂದು ವಿಲೇಜ್ ಇದೆ. ಇವತ್ತು ಅನಂತಕುಮಾರ ಹೆಗಡೆ ಬಾಯಲ್ಲಿ ಹಂಡ್ರೆಡ್ ಪರ್ಸಂಟ್ ಹಿಂದುವಿಲೇಜ ಅಂದರೆ ಬೆಂಕಿಹಾಕಲು ಹೊರಟಿದ್ದಾನೆ ಎಂದು ಹೇಳುತ್ತಾರೆ. ರಾಮಭಜನೆ ಇಡೀ ಜಗತ್ತಿನ ಮೂಲೆಮೂಲೆಗಳಲ್ಲಿ ಹರೇರಾಮ ಹರೇಕೃಷ್ಣ ಆಂದೋಲನವಾಗಿದೆ ಎಂದರು.

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಲೋಕಾರ್ಪನೆಯಿಂದ ಭಾರತದ ಸ್ವಾಭಿಮಾನಕ್ಕೊಂದು ಗರಿಸಿಕ್ಕಿದೆ. ರಾಮಭಕ್ತರ ಕನಸು ನನಸಾಗಿದೆ ಎಂದರು. ವೇದಿಕೆಯಲ್ಲಿ ಶ್ರೀಕುಮಾರ ಸಮೂಹ ಸಂಸ್ಥೆಯ ಮುಖ್ಯಸ್ಥ ವೆಂಕಟರಮಣ ಹೆಗಡೆ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ್ಲ ಶ್ರೀಕಾಂತ ಮೊಗೇರ, ಸತೀಶ ಹೆಬ್ಬಾರ ಇದ್ದರು.

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Back to top button