Focus News
Trending
ಮಗಳನ್ನು ಉಳಿಸಿ ಮಗಳನ್ನು ಓದಿಸಿ ಕಾರ್ಯಕ್ರಮ: ಹೆಣ್ಣು ಮಗುವಿಗೆ ಹೂವಿನ ಗಿಡ & ಸಿಹಿ ತಿಂಡಿ ನೀಡಿ ಶುಭಾಶಯ
ಕುಮಟಾ: ಮಗಳನ್ನು ಉಳಿಸಿ ಮಗಳನ್ನು ಓದಿಸಿ ಕಾರ್ಯಕ್ರಮದ ನಿಮಿತ್ತ ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನಾಂಕ 05-02-2024 ರಂದು ಜನಿಸಿದ ಹೆಣ್ಣು ಮಗುವಿಗೆ ಹೂವಿನ ಗಿಡ ಹಾಗೂ ಸಿಹಿ ತಿಂಡಿ ನೀಡಿ ಶುಭಾಶಯ ಕೋರಲಾಯಿತು. ಈ ಸಂದರ್ಭದಲ್ಲಿ ಮಾನ್ಯ ತಶಿಲ್ದಾರರಾದ ಶ್ರೀ ಪ್ರವೀಣ ಕರಾಂಡೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ನಾಗರತ್ನಾ ನಾಯಕ, ತಾಲೂಕಾ ಆರೋಗ್ಯಾಧಿಕಾರಿಗಳಾದ ಶ್ರೀಮತಿ ಆಜ್ಞಾ ನಾಯಕ, ಸ್ತ್ರೀ ರೋಗತಜ್ಞರಾದ ಡಾ. ಕೃಷ್ಣಾನಂದ, ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಸಿಬ್ಬಂದಿಗಳು ಹಾಜರಿದ್ದರು.
ವಿಸ್ಮಯ ನ್ಯೂಸ್, ಕುಮಟಾ