Big News
Trending

ರಾಷ್ಟ್ರೀಯ ಭಾವೈಕ್ಯತಾ ಮಕ್ಕಳಮೇಳ: ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ

ಕುಮಟಾ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ಶಾಲಾ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕುಮಟಾ, ಭಾರತ ಸೇವಾದಳ ತಾಲೂಕಾ ಸಮಿತಿ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕ ಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ ಕಾರ್ಯಕ್ರಮವನ್ನು ಕುಮಟಾದ ಮಣಕಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ತಾಲೂಕಿನ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.

ಬಳಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಮಿತಿ ಬೆಂಗಳೂರು ಇದರ ಕಾರ್ಯಕಾರಿ ಸದಸ್ಯರಾದ ಎಮ್.ಬಿ ಪೈ ಅವರು ದೀಪ ಬೆಳಗುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತ ಸೇವಾದಳವು ಕಳೆದ ಸುಮಾರು 74 ವರ್ಷಗಳಿಂದ ನಮ್ಮ ಕರ್ನಾಟಕ ರಾಜ್ಯದಲ್ಲಿ ಉತ್ತಮವಾಗಿ ಕೆಲಗಳನ್ನು ಮಾಡಿಕೊಂಡು ಬಂದಿದೆ. ಅದೇ ರೀತಿ ವಿವಿಧ ಜಿಲ್ಲೆ, ತಾಲೂಕು ಮುಂತಾದ ಭಾಗದಲ್ಲಿ ಮಕ್ಕಳ ಅಭಿವೃದ್ಧಿಗಾಗಿ, ಮಕ್ಕಳಲ್ಲಿ ರಾಷ್ಟç ಪ್ರೇಮವನ್ನು ಬೆಳೆಸುವಂತಹ ಹಾಗೂ ಭಾವೈಕ್ಯತೆ ಮೂಡಿಸುವ ಇಂತಹ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿರುವುದು ಬಹಳ ಹೆಮ್ಮೆಯ ಸಂಗತಿ. ಕರೋನಾ ಲಾಕ್‌ಡೌನ್ ಬಳಿಕ ನಮ್ಮ ಜಿಲ್ಲೆಯಲ್ಲಿಯೂ ಭಾರತ ಸೇವಾದಳದ ವತಿಯಿಂದ ಅನೇಕ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಭಾರತ ಸೇವಾದಳದ ಜಿಲ್ಲಾ ಸಮಿತಿ ಅಧ್ಯಕ್ಷರಾದ ಯೋಗೇಶ ಆರ್. ರಾಯ್ಕರ್ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮಧ್ಯವರ್ತಿ ಸ್ಥಳವಾದ ಕುಮಟಾದಲ್ಲಿ ಜಿಲ್ಲಾ ಸಮಿತಿಯ ಕಚೇರಿಯನ್ನು ನಿರ್ಮಿಸಿ, ಕಳೆದ ಸುಮಾರು 7 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೆವೆ. ನಮಗೆ ಸ್ವಂತ ಕಟ್ಟಡ ನಿರ್ಮಿಸಲು ಜಾಗವೂ ಸಹ ಮಂಜೂರಿ ಹಂತದಲ್ಲಿದೆ. ಸುಸಜ್ಜಿತ ಕಚೇರಿಯ ಅವಶ್ಯಕತೆಯಿರುವ ಕಾರಣ ಸ್ಥಳೀಯ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ವಿನಂತಿಸಿಕೊoಡರು.

ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಬೆಂಗಳೂರು ಇದರ ನಿವೃತ್ತ ದಳಪತಿಗಳಾದ ಜೆ.ಎಸ್ ನಾಯ್ಕ ಅವರು ಮಾತನಾಡಿ, ಸ್ವಾತಂತ್ರö್ಯ ಹೊರಾಟದಲ್ಲಿ ಹಿರಿದಾದ ಪಾತ್ರ ವಹಿಸಿರುವ ಈ ಒಂದು ಭಾರತ ಸೇವಾದಳ ಸಂಘಟನೆಯು ಅಂದು ಪ್ರಸ್ತುತ, ಇಂದು ಪ್ರಸ್ತುತ ಹಾಗೂ ಮುಂದು ಪ್ರಸ್ತುತ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ಎಲ್ ಭಟ್, ಭಾರತ ಸೇವಾದಳ ಸಮಿತಿಯ ತಾಲೂಕಾಧ್ಯಕ್ಷರಾದ ಸಂತೋಷ ನಾಯ್ಕ, ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್.ಎಸ್ ಪಟಗಾರ, ಸಮನ್ವಯಾಧಿಕಾರಿ ರೇಖಾ ನಾಯ್ಕ, ಪ್ರಮುಖರಾದ ರಾಘು ಮುಕ್ರಿ, ವಿನಾಯಕ ವೈದ್ಯ ಸೇರಿದಂತೆ ಶಿಕ್ಷಕ ವೃಂದದವರು ಹಾಗೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಿದ್ದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ

Back to top button