Important
Trending

ಫಲಿಸಲಿಲ್ಲ ನಾಲ್ಕು ತಿಂಗಳ ಚಿಕಿತ್ಸೆ: ಕಾರ್ಯಾಚರಣೆ ವೇಳೆ ನಾಗರಹಾವು ಕಚ್ಚಿದ್ದ ಉರಗತಜ್ಞ ಸಾವು

ಹೊನ್ನಾವರ: ಹಾವನ್ನು ಹಿಡಿಯುವಾಗ ದಿಡೀರ್ ಕೈ ಭಾಗಕ್ಕೆ ಹಾವು ಕಚ್ಚಿದ್ದ ವೇಳೆ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಉಗರತಜ್ಞ ಅಬು ತಲಾ ನಾಲ್ಕು ತಿಂಗಳ ಬಳಿಕ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ತಾಲೂಕಿನ ಗುಂಡಬಾಳ ಸಮೀಪ ನಾಲ್ಕು ತಿಂಗಳ ಹಿಂದೆ ಮನೆಗೆ ಆಗಮಿಸಿದ ನಾಗರ ಹಾವನ್ನು ಹಿಡಿಯಲು ಹೋದ ಉರಗ ತಜ್ಞನಿಗೆ ಹಾವು ಕಡಿದಿತ್ತು. ರಾತ್ರಿ ಸಮಯದಲ್ಲಿ ಮನೆಯ ಸಮೀಪ ಕಾಣಿಸಿಕೊಂಡ ನಾಗರಹಾವು ಹೊಗದೆ ಇರುದರಿಂದ ಉರಗಪ್ರೇಮಿ ಅಬು ತಲಾ ಅವರಿಗೆ ಮನೆಯವರು ಮಾಹಿತಿ ನೀಡಿದ್ದರು.

ಹಾವನ್ನು ಹಿಡಿಯುವಾಗ ಕೈ ಭಾಗಕ್ಕೆ ಹಾವು ಕಚ್ಚಿತ್ತು. ಆದರೂ ಆದರೂ ಹಾವನ್ನು ಹಿಡಿದ್ದರು. ನಂತರ ತಾಲೂಕ ಆಸ್ಪತ್ರೆಗೆ ಕರೆದೊಯ್ದರು ಸ್ಥಿತಿ ಗಂಭೀರವಾಗಿರುವುದರಿoದ ಕೂಡಲೇ ನೆರೆ ಜಿಲ್ಲೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸರಿಸುಮಾರು ನಾಲ್ಕು ತಿಂಗಳು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೇ ಇದೀಗ ಮೃತಪಟ್ಟಿದ್ದಾರೆ.

ವಿಸ್ಮಯ ನ್ಯೂಸ್, ಹೊನ್ನಾವರ

Back to top button