Important
Trending

ಉತ್ತರಕನ್ನಡ ಜಿಲ್ಲೆಯಲ್ಲಿ ಓರ್ವ ವಿದೇಶಿಗ ಅಕ್ರಮವಾಗಿ ವಾಸ: ರಾಜ್ಯಗೃಹ ಇಲಾಖೆ ಮಾಹಿತಿ

ಕಾರವಾರ: ರಾಜ್ಯದಲ್ಲಿ 71 ಮಂದಿ ವಿದೇಶಿ ಅಕ್ರಮ ವಲಸಿಗರು ಇದ್ದಾರೆಂದು ರಾಜ್ಯಗೃಹ ಇಲಾಖೆ ತಿಳಿಸಿದ್ದು, ಇವರಲ್ಲಿ ಉತ್ತರ ಕನ್ನಡದ ಓರ್ವರು ಸೇರಿದ್ದಾರೆ. ವಿಧಾನಸಭೆಯಲ್ಲಿ ಕಾರ್ಕಳ ಶಾಸಕರಾದ ಸುನೀಲ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ರಾಜ್ಯ ಗೃಹ ಇಲಾಖೆ, ರಾಜ್ಯದಲ್ಲಿ 71 ಅಕ್ರಮ ವಿದೇಶಿಗರು ನೆಲೆಸಿದ್ದಾರೆ ಎಂದು ಹೇಳಿದ್ದು, ಅವರು ಯಾವ್ಯಾವ ಜಿಲ್ಲೆಯಲ್ಲಿದ್ದಾರೆಂಬ ವಿವರಣೆಯನ್ನೂ ನೀಡಿದೆ.

ಇವರಲ್ಲಿ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ಸೇರಿದಂತೆ ಇನ್ನಿತರ ನಕಲಿ ದಾಖಲೆ ಸೃಷ್ಠಿಸುತ್ತಿರುವ 44 ಜನರ ವಿರುದ್ಧ 6 ಪ್ರಕರಣ ದಾಖಲಾಗಿದೆ ಎಂದು ವಿವರಿಸಲಾಗಿದೆ. ಶಿಕ್ಷಣದ ಹೆಸರಿನಲ್ಲಿ ಬಂದು ವಿಸಾ ಅವಧಿ ಮುಗಿದರೂ ಕೆಲವು ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button