Important
Trending

ಶರಾವತಿ ನದಿ ತೀರದ ಜನತೆಗೆ ಪ್ರವಾಹದ ಎರಡನೇ ಮುನ್ನೆಚ್ಚರಿಕೆಯ ಸೂಚನೆ ಜಾರಿ: ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ

ಹೊನ್ನಾವರ: ಶರಾವತಿ ಯೋಜನೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಸತತವಾಗಿ ಬೀಳುತ್ತಿರುವ ಮಳೆಯಿಂದ ಜಲಾಶಯದ ನೀರಿನ ಮಟ್ಟವು ಏಕಪ್ರಕಾರವಾಗಿ ಏರುತ್ತಿದೆ.

ಯುವತಿಯ ಸಾವಿನ ಸುತ್ತ ಅನುಮಾನದ ಹುತ್ತ ? ಬಡ ಕುಟುಂಬದ ಹೆಣ್ಣುಮಗಳು ಬಟ್ಟೆ ಅಂಗಡಿಯಲ್ಲಿದ್ದು ಈ ಫ್ಯಾಷನ್ ಗೆ ಮರುಳಾದಳೇ ?

ಲಿಂಗನಮಕ್ಕಿ ಜಲಾಶಯದ ಗರಿಷ್ಟ ಮಟ್ಟಪ್ಪ 1819.00 ಅಡಿಗಳು ಮತ್ತು ಈಗಿನ ಜಲಾಶಯದ ಮಟ್ಟವು ಇಂದು ಸಂಜೆ 05,00 ಘಂಟೆಗೆ 1806.95 ಅಡಿಗಳಾಗಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳಹರಿವು ಸುಮಾರು 67000 ಕ್ಯೂಸೆಕ್ಸ್ ಆಗಿರುತ್ತದೆ. ಇದೇ ರೀತಿ ಜಲಾಶಯಕ್ಕೆ ಒಳಹರಿವು ಮುಂದುವರೆದ ಪಕ್ಷದಲ್ಲಿ, ಜಲಾಶಯದ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ.

ಲಿಂಗನಮಕ್ಕಿ ಆಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಯಾವುದೇ ಸಮಯದಲ್ಲಿ ಹೆಚ್ಚಾದ ನೀರನ್ನು ಹೊರಬಿಡಲಾಗುವುದು, ಲಿಂಗನಮಕ್ಕಿ ಜಲಾಶಯದಿಂದ ಬಿಟ್ಟ ಎಲ್ಲಾ ನೀರು ಗೇರುಸೊಪ್ಪ ಜಲಾಶಯಕ್ಕೆ ಹರಿದು ಬರುತ್ತದೆ. ಗೇರುಸೊಪ್ಪ ಜಲಾಶಯವು ನೀರಿನ ಸಂಗ್ರಹವನ್ನು ಗರಿಷ್ಠ ಮಟ್ಟದಲ್ಲಿ ಕಾಪಾಡಿ ವಿದ್ಯುತ್ ಉತ್ಪಾದಿಸುವ ಜಲಾಶಯವಾದ್ದರಿಂದ ಹಾಗು ಸಂಗ್ರಹಣಾ ಸಾಮರ್ಥ್ಯವ ಕಡಿಮೆಯಿರುವುದರಿಂದ, ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚುವರಿಯಾಗಿ ಹೊರಬಿಟ್ಟ ನೀರನ್ನು ಗೇರುಸೊಪ್ಪ ಜಲಾಶಯದಲ್ಲಿ ಸಂಗ್ರಹಿಸುವ ಅವಕಾಶ ಇಲ್ಲದೆಇರುವುದರಿಂದ ಗೇರುಸೊಪ್ಪ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ಈ ಮೂಲಕ ಎಚ್ಚರಿಸಲಾಗಿದೆ.

ಜಲಾಶಯದ ಪ್ರತಿದಿನದ ನೀರಿನಮಟ್ಟಿ ಮತ್ತು ಒಳಹರಿವಿನ ಪ್ರಮಾಣದ ವಿವರಗಳನ್ನು ಮಾದ್ಯಮಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Back to top button