ಅಂಕೋಲಾ: ಕಳೆದ 110 ವರ್ಷಗಳ ಹಿಂದೆಯೇಸ್ಥಾಪಿಸಲ್ಪಟ್ಟು, ಯಶಸ್ವಿಯಾಗಿ ಮುಂದುವರೆಯುತ್ತ , ಅಂಕೋಲಾದಲ್ಲಿ ಪ್ರಧಾನ ಕಛೇರಿ ಹೊಂದಿರುವ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ( Ankola Urban Co-Operative Bank) ಜಿಲ್ಲೆಯ ಪ್ರಮುಖ ಸಹಕಾರಿ ಬ್ಯಾಂಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಫೆ 22 ರಂದು ಸಾಯಂಕಾಲ ಬ್ಯಾಂಕಿನ 7 ನೇ ಶಾಖೆಯನ್ನು ಕುಮಟಾದಲ್ಲಿ ಆರಂಭಿಸಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ನಾರ್ವೇಕರ್ ತಿಳಿಸಿದರು.
ಸಹಕಾರಿ ತತ್ವಕ್ಕೆ ಅನುಗುಣವಾಗಿ ಕಳೆದ ಒಂದು ಶತಮಾನದ ಹಿಂದೆಯೇ ಅಂಕೋಲಾದಲ್ಲಿ ಸ್ಥಾಪಿಸಲಾಗಿದ್ದ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ( Ankola Urban Co-Operative Bank) ಇಂದು 110 ವರ್ಷಗಳನ್ನು ಪೂರೈಸಿ ಮುನ್ನಡೆಯುತ್ತಿದೆ. 2022-23 ನೇ ಆರ್ಥಿಕ ಸಾಲಿನ ಅಂತ್ಯಕ್ಕೆ ಬ್ಯಾಂಕು 62.10 ಲಕ್ಷ ನಿವ್ವಳ ಲಾಭ ಗಳಿಸಿದ್ದು ಶೇರುದಾರರಿಗೆ 8 ಪ್ರತಿಶತ ಲಾಭಾಂಶ ನೀಡಿ ಬದಲಾಗುತ್ತಿರುವ ಕಾಲ ಮಾನ ಪದ್ಧತಿಗೆ ಅನುಗುಣವಾಗಿ ಖಾಸಗಿ ಬ್ಯಾಂಕುಗಳ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಪೈಪೋಟಿಯ ನಡುವೆಯೂ ಗ್ರಾಹಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಯುಪಿಐ ಪೇಮೆಂಟ್ ಸೇರಿದಂತೆ ಆಧುನಿಕ ಮತ್ತು ಡಿಜಿಟಲಿಕರಣಕ್ಕೆ ಬ್ಯಾಂಕ್ ತೆಗೆದುಕೊಳ್ಳಲಿದೆಯಲ್ಲದೇ , ಅಂಕೋಲಾ, ಬೆಲೇಕೇರಿ ಅವರ್ಸಾ, ಕಾರವಾರ, ಯಲ್ಲಾಪುರ, ಶಿರಸಿ ಬಳಿಕ ಫೆ 22 ರಂದು ಬ್ಯಾಂಕಿನ 7 ನೇ ಶಾಖೆಯಾಗಿ ಕುಮಟಾದಲ್ಲಿಯೂ ಸೇವೆ ಆರಂಭಿಸಲಿದೆ.
ಈ ಕುರಿತು ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ನಾರ್ವೇಕರ ಮಾತನಾಡಿ,ಅಂಕೋಲಾ ಹಾಗೂ ಜಿಲ್ಲೆಯ ಇತರ ಶಾಖೆಗಳಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿರುವ ನಮ್ಮ ಅಂಕೋಲಾ ಅರ್ಬನ್ ಬ್ಯಾಂಕಿನ 7 ನೇ ಶಾಖೆ ಕುಮಟಾದಲ್ಲಿ ತೆರೆದುಕೊಳ್ಳುತ್ತಿದ್ದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ, ಗೋವಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ್ ವಡೇರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು,ಶಾಸಕ ದಿನಕರ್ ಶೆಟ್ಟಿ,ಪ್ರಮುಖರಾದ ಮಂಜುನಾಥ್ ಸಿಂದ್,ಮುರಳಿಧರ್ ಪ್ರಭು, ಡಾ. ಜಿ. ಜಿ ಹೆಗಡೆ,ರಾಜೇಂದ್ರ ಎಲ್ ಭಟ್, ಆರ್ ಜಿ ನಾಯ್ಕ ಮತ್ತಿತರರು ಉಪಸಿತರಿರಲಿದ್ದು,ಕುಮಟಾ ಹೊನ್ನಾವರ ಹಾಗೂ ಸುತ್ತಮುತ್ತಲ ಎಲ್ಲ ಗ್ರಾಹಕ ಬಂಧುಗಳ ಉಪಸ್ಥಿತಿ ಹಾಗೂ ಸಹಕಾರ ಕೋರಿದ್ದಾರೆ.
ಬ್ಯಾಂಕಿನ ನಿರ್ದೇಶಕ ಮತ್ತು ನೋಟರಿಗಳ ಸಂಘದ ಜಿಲ್ಲಾಧ್ಯಕ್ಷ ನಾಗಾನಂದ ಬಂಟ ಮಾತನಾಡಿ ತಮ್ಮ ಬ್ಯಾಂಕ್ 6 ಶಾಖೆಗಳೊಂದಿಗೆ ಸೇವೆ ನೀಡುತ್ತಿದ್ದು ಕುಮಟಾದಲ್ಲಿ ಆರಂಭಗೊಳ್ಳಲಿರುವ 7ನೇ ಶಾಖೆಗೂ ಸರ್ವರೂ ಸಹಕರಿಸುವಂತೆ ಕೋರಿಕೊಂಡರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ರವೀಂದ್ರ ಪಿ ವೈದ್ಯ ಉಪಸ್ಥಿತರಿದ್ದರು.
ಫೆಬ್ರುವರಿ 22ರ ಗುರುವಾರ ಸಾಯಂಕಾಲ 4:00ಗೆ ಕುಮಟಾದ ಕುಂಬೇಶ್ವರ ರಸ್ತೆಯ ಪಂಡಿತ್ ಆಸ್ಪತ್ರೆ ಹತ್ತಿರ ವಿಶ್ವ ಪ್ರೇಮ ಬಿಲ್ಡಿಂಗ್ ನಲ್ಲಿ ನೂತನ ಶಾಖೆ ಉದ್ಘಾಟನೆಗೊಳ್ಳಲಿದ್ದು,ಬ್ಯಾಂಕಿನ ಅಧ್ಯಕ್ಷರು ಉಪಾಧ್ಯಕ್ಷರು ಪ್ರಧಾನ ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳು ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ,ವೃತ್ತಿಪರ ನಿರ್ದೇಶಕರು ಸರ್ವರಿಗೂ ಸ್ವಾಗತ ಕೋರಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ