Important
Trending

ಕಿತ್ರೆಯ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ಸುಸಂಪನ್ನ: ರಾಘವೇಶ್ವರ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಧರ್ಮ ಸಭೆ

ಭಟ್ಕಳ: ತಾಲ್ಲೂಕಿನ ಶಕ್ತಿ ಕ್ಷೇತ್ರವಾದ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ( Kitre Durga Parameshwari Temple) ರಥೋತ್ಸವವು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸುಸಂಪನ್ನಗೊoಡಿತು. ನಂತರ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಏರ್ಪಡಿಸಲಾದ ಧರ್ಮ ಸಭೆ ನಡೆಯಿತು.

ಭಕ್ತರನ್ನುದ್ದೇಶಿ ಶ್ರೀಗಳು ಆರ್ಶೀವಚನ ನೀಡಿದ್ದು, ‘ ಸಮಾಜ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ. ಉತ್ತಮ ಸಂಘಟನೆಯ ಜೊತೆಗೆ ಹಳೆ ಪೀಳಿಗೆಯ ಮಾರ್ಗದರ್ಶನದಲ್ಲಿ ಯುವ ಪೀಳಿಗೆ ಮುಂದುವರೆದಲ್ಲಿ ಕ್ಷೇತ್ರವು ಅಭಿವೃದ್ಧಿ ಸಾಧಿಸಲಿದೆ. ಕ್ಷೇತ್ರದಲ್ಲಿ ಆಗಲಿ ಮನೆಯಲ್ಲಾಗಲಿ ತಾಯಿಗಿಂತ ಮೊದಲು ಯಾರು ಇಲ್ಲ. ಈ ಕ್ಷೇತ್ರದ ಮಾತೆಯ ಮುಂದೆ ನಮ್ಮ ಮಾತುಗಳೇ ಬರುತ್ತಿಲ್ಲ. ಈ ದಿನವು ಭಕ್ತರಿಗೆ ಮನೋತ್ಸವದ ಸಂಧರ್ದ ತಂದಿದೆ.

Kitre Durga Parameshwari Temple: ಇಲ್ಲಿನ ಭಕ್ತರು ಜಾಗ್ರತರಾಗಿದ್ದಾಳೆಂದರೆ ದೇವಿಯು ಜಾಗ್ರತರಾಗಿದ್ದಾಳೆ. ವಿಶೇಷವಾಗಿ ಶ್ರೀ ಕ್ಷೇತ್ರ ಕಿತ್ರೆಯಲ್ಲಿ ಭಕ್ತರು ಜಾಗ್ರತರಾಗಿ ಒಗ್ಗಟ್ಟಾಗುವದರ ಜೊತೆಗೆ ಹಳೆ ಪೀಳಿಗೆಯ ಮಾರ್ಗದರ್ಶನದಲ್ಲಿ ಹೊಸ ತಲೆಮಾರು ಕ್ಷೇತ್ರದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ. ಹೊಸ ತಲೆಮಾರು ಜವಾಬ್ದಾರಿ ವಹಿಸಿಕೊಳ್ಳಬೇಕು. ದೇವಸ್ಥಾನ, ಶ್ರೀ ಮಠದ ಕಾರ್ಯದಲ್ಲಿ ಹಿರಿಯರ ಜೊತೆ ಯುವಕರೂ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು. ಯುವಕರು ಸಂಘಟಿತರಾದರೆ ಯಾವುದೇ ಕೆಲಸ ಮಾಡಬಹುದು ಎಂದರು.

ಇಡೀ ಭಾರತದಲ್ಲಿ ಮುದುಕರು ಹಳ್ಳಿಗಳಲ್ಲಿ ಯುವಕರು ಪೇಟೆಯಲ್ಲಿದ್ದಾರೆ. ಭಾರತಕ್ಕೆ ಮುಪ್ಪಾಗಿದೆ ಆದರೆ ಇಂಡಿಯಾಗೆ ಯೌವ್ವನವಾಗಿದೆ. ಹಳ್ಳಿಗಳಿಗೆ ಜೀವ ಇದೆ ಎಂದರೆ ಹಿರಿಯರ ಅಧಿಕ ಶ್ರಮವೇ ಕಾರಣ. ದೇವಿಯ ನಿತ್ಯ ಕಾರ್ಯಕ್ಕೆ ಇಂದಿನ ಯುವಕರ ಸೇವೆ ಮುಂದುವರೆಯಬೇಕು ಎಂದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Back to top button